
Avatar: Fire and Ash
ಬೆಂಗಳೂರು: ಜೇಮ್ಸ್ ಕೆಮರೂನ್ ಅವರ ಜನಪ್ರಿಯ ಅವತಾರ್ ಸರಣಿಯ ಮೂರನೇ ಸಿನಿಮಾ ‘ಅವತಾರ್ ಫೈರ್ ಆ್ಯಂಡ್ ಆಶ್’ ಕಳೆದ ಶುಕ್ರವಾರ ಬಿಡುಗಡೆಯಾಗಿದ್ದು ಗಳಿಕೆಯಲ್ಲಿ ಭಾರಿ ಯಶಸ್ಸು ಸಾಧಿಸಿದೆ.
ಹಲವು ವರದಿಗಳ ಪ್ರಕಾರ ಹಾಗೂ ಸಿನಿ ವಿಶ್ಲೇಷಕರ ಪ್ರಕಾರ ಈ ಸಿನಿಮಾ ಮೂರು ದಿನದಲ್ಲಿ ಸಾವಿರ ಕೋಟಿ ರೂಪಾಯಿಗೂ ಅಧಿಕ ಗಳಿಕೆ ಕಂಡಿದೆ ಎನ್ನಲಾಗಿದೆ.
ಮೂರು ದಿನದಲ್ಲಿ ಜಾಗತಿಕ ಬಾಕ್ಸ್ ಆಫೀಸ್ ಕಲೆಕ್ಷನ್ 137 ಮಿಲಿಯನ್ ಯುಎಸ್ ಡಾಲರ್ ಎಂದು ಹೇಳಲಾಗಿದೆ. ಅಂದರೆ ಮೂರೇ ದಿನದಲ್ಲಿ ₹1200 ಕೋಟಿಗೂ ಅಧಿಕ ಗಳಿಕೆ ಕಂಡಿದೆ.
ಅವತಾರ್–3 ಸಿನಿಮಾವನ್ನು ಸುಮಾರು ₹3000 ಕೋಟಿಗೂ ಅಧಿಕ ವೆಚ್ಚದಲ್ಲಿ ತಯಾರಿಸಲಾಗಿದೆ ಎಂದು ನಿರ್ಮಾಪಕರು ಹೇಳಿಕೊಂಡಿದ್ದಾರೆ.
ಕ್ರಿಸ್ಮಸ್ ರಜೆ ಇರುವುದರಿಂದ ಸಿನಿಮಾದ ಗಳಿಕೆಗೆ ಪೂರಕವಾಗಿದೆ ಎನ್ನಲಾಗಿದ್ದು, ಟೀಕೆಗಳ ನಡುವೆಯೂ ಉತ್ತಮ ಹಣ ಗಳಿಸುತ್ತಿದ್ದೆ ಎಂದು ಬಾಕ್ಸ್ ಆಫೀಸ್ ತಜ್ಞರು ಹೇಳಿದ್ದಾರೆ. ಡಿಸೆಂಬರ್ 31ರೊಳಗೆ ಈ ಸಿನಿಮಾ ₹3 ಸಾವಿರ ಕೋಟಿ ಗಳಿಕೆ ಕಾಣಬಹುದು ಎಂಬುದು ಟ್ವಿಟರ್ ಗ್ರೋಕ್ ಲೆಕ್ಕಾಚಾರ.
ಭಾರತದಲ್ಲಿ ಹೇಗಿದೆ ಗಳಿಕೆ?
ಅವತಾರ್ ಎಂಬ ಸೈನ್ಸ್ ಫಿಕ್ಸನ್ ಸಿನಿಮಾಕ್ಕೂ ಭಾರತದಲ್ಲಿ ಅಪಾರ ಅಭಿಮಾನಿಗಳಿದ್ದು ಇಲ್ಲೂ ಕೂಡ ಮೊದಲ ಮೂರು ದಿನದಲ್ಲಿ ಸುಮಾರು ₹50 ಕೋಟಿಗೂ ಅಧಿಕ ಗಳಿಕೆ ಕಂಡಿದೆ ಎಂದು ಕೆಲ ವರದಿಗಳು ಹೇಳಿವೆ.
ಇನ್ನು ಈ ಸಿನಿಮಾ ಬಗ್ಗೆ ಮಿಶ್ರ ಅಭಿಪ್ರಾಯಗಳು ವ್ಯಕ್ತವಾಗಿದ್ದು ನಿರ್ದೇಶಕ ಜೇಮ್ಸ್ ಕೆಮರೂನ್ ಹೆಚ್ಚು ಟೀಕೆಗಳನ್ನು ಎದುರಿಸುತ್ತಿದ್ದಾರೆ.
ಇದೇ ವರ್ಷ ಡಿಸೆಂಬರ್ 19 ರಂದು ಈ ಚಿತ್ರ ಬಿಡುಗಡೆಯಾಗಲಿದೆ. ಅವರತಾರ್ ಮೊದಲ ಸಿನಿಮಾ ‘ಅವತಾರ್’ 2009 ರಲ್ಲಿ ಬಿಡುಗಡೆಯಾಗಿತ್ತು. ‘ಅವತಾರ್ ವೇ ಆಫ್ ವಾಟರ್’ ಎರಡನೇ ಸಿನಿಮಾ 2022ರಲ್ಲಿ ಬಿಡುಗಡೆಯಾಗಿತ್ತು.
2045 ರ ಸಮಯದಲ್ಲಿ ಭೂಮಿಯಿಂದ ಮಾನವರು ಪಂಡೊರಾ ಎಂಬ ಕಾಲ್ಪನಿಕ ಗೃಹಕ್ಕೆಹೋಗಿ ಅಲ್ಲಿನ ಅಮೂಲ್ಯ ವಸ್ತುವನ್ನು ತರಲು ಯತ್ನಿಸುತ್ತಾರೆ. ಆಗ ಅಲ್ಲಿನ ಮನುಷ್ಯರಂತ ಜೀವಿಗಳಿಂದ ಭೂಮಿಯ ಮಾನವರಿಗೆ ಎದುರಾಗುವ ಪ್ರತಿರೋಧ, ಪರಸ್ಪರ ಹೋರಾಟದ ಅಂಶಗಳನ್ನು ಅವತಾರ್ ಕಥೆ ಹೊಂದಿದೆ.
ಸ್ಯಾಮ್ ವರ್ತಿಂಗ್ಟನ್, ಜೋಯ್ ಸಲ್ಡಾನಾ, ಸಿಗೋರ್ನಿ ವೀವರ್, ಸ್ಟೀಫನ್ ಲ್ಯಾಂಗ್, ಊನಾ ಚಾಪ್ಲಿನ್, ಕ್ಲಿಫ್ ಕರ್ಟಿಸ್, ಬ್ರಿಟನ್ ಡಾಲ್ಟನ್, ಟ್ರಿನಿಟಿ ಜೋ-ಲಿ ಬ್ಲಿಸ್, ಜ್ಯಾಕ್ ಚಾಂಪಿಯನ್, ಬೈಲಿ ಬಾಸ್, ಕೇಟ್ ವಿನ್ಸ್ಲೆಟ್ ಪ್ರಮುಖ ತಾರಾಗಣದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.