
Avatar: Fire and Ash trailer
ಜೇಮ್ಸ್ ಕೆಮರೂನ್ ಅವರ ಜನಪ್ರಿಯ ‘ಅವತಾರ್’ ಸರಣಿಯ ಮೂರನೇ ಸಿನಿಮಾ ‘ಅವತಾರ್ ಫೈರ್ ಆ್ಯಂಡ್ ಆಶ್’ ಬಿಡುಗಡೆಗೆ ಇನ್ನೊಂದು ತಿಂಗಳು ಬಾಕಿ ಉಳಿದಿದ್ದು, ಸಿನಿಮಾದ ಟಿಕೆಟ್‌ಗಳ ಮುಂಗಡ ಬುಕಿಂಗ್ ಆರಂಭವಾಗಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.
ಪ್ಯಾಂಡೊರಾ ಜಗತ್ತಿನ ಮತ್ತೊಂದು ಕಥೆ ಹೇಳಲಿರುವ ‘ಅವತಾರ್ ಫೈರ್ ಆ್ಯಂಡ್ ಆಶ್’ ಸಿನಿ ಪ್ರಿಯರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ‘ವರಾಂಗಾ’ ಎಂಬ ಹೊಸ ನೇಟಿವ್ ವಿಲನ್ ಪಾತ್ರವನ್ನು ಸೃಷ್ಟಿಸಲಾಗಿದ್ದು, ಒಂದೊಂದು ದೃಶ್ಯಗಳೂ ಕಣ್ಣಿಗೆ ಹಬ್ಬವನ್ನುಂಟು ಮಾಡಲಿವೆ. ಈ ಸಿನಿಮಾಗೆ ಬರೋಬ್ಬರಿ ₹2100 ಕೋಟಿಗೂ ಅಧಿಕ ವೆಚ್ಚ ಮಾಡಲಾಗಿದೆ.
ಈಗಾಗಲೇ ಅವತಾರ್ ಫೈರ್ ಆ್ಯಂಡ್ ಆಶ್ ಸಿನಿಮಾದ ಟಿಕೆಟ್‌ಗಳ ಮುಂಗಡ ಬುಕಿಂಗ್ ಆರಂಭವಾಗಿದ್ದು, ಈ ಬಗ್ಗೆ ಅವತಾರ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ‘ಡಿಸೆಂಬರ್ 19 ರಂದು ಚಿತ್ರಮಂದಿರಗಳಲ್ಲಿ ಮತ್ತು ಐಮ್ಯಾಕ್ಸ್‌ನಲ್ಲಿ ಮಾತ್ರ ಅವತಾರ್: ಫೈರ್ ಮತ್ತು ಆಶ್ ನೋಡಿ’ ಎಂದು ತಿಳಿಸಿದೆ.
ಈ ಸಿನಿಮಾದ ಟ್ರೇಲರ್ ಜುಲೈ 29ರಂದು ಬಿಡುಗಡೆಯಾಗಿತ್ತು. ದೃಶ್ಯಗಳು ಸಿನಿ ಪ್ರಿಯರನ್ನು ಆಕರ್ಷಿಸಿದ್ದವು. ಇದೇ ಡಿಸೆಂಬರ್ 19ರಿಂದ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನಗೊಳಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.