ADVERTISEMENT

ಕೂದಲು ಪರೀಕ್ಷೆ ವರದಿ ಸಿಸಿಬಿಗೆ: ರಾಗಿಣಿ, ಸಂಜನಾ ಡ್ರಗ್ಸ್ ಸೇವಿಸಿದ್ದು ದೃಢ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2021, 8:49 IST
Last Updated 24 ಆಗಸ್ಟ್ 2021, 8:49 IST
ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ
ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ   

ಬೆಂಗಳೂರು: ಅಂತರರಾಷ್ಟ್ರೀಯ ಡ್ರಗ್ಸ್ ಪ್ರಕರಣದಲ್ಲಿ ಈ ಹಿಂದೆ ಬಂಧಿಸಲಾಗಿದ್ದ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಹಾಗೂ ಇತರರ ಕೂದಲು ಮಾದರಿ ವರದಿ ಸಿಸಿಬಿ ಅಧಿಕಾರಿಗಳ ಕೈ ಸೇರಿದೆ.

ಆರೋಪಿಗಳನ್ನು‌ ಬಂಧಿಸಿದ್ದ ಸಿಸಿಬಿ ಪೊಲೀಸರು, ಮಾದಕ ವಸ್ತು ಸೇವನೆ ಪತ್ತೆ ಮಾಡಲು ಎಲ್ಲರ ಕೂದಲು ಮಾದರಿ ಸಂಗ್ರಹಿಸಿ ಹೈದರಾಬಾದ್ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಆದರೆ, ಮೊದಲ ಬಾರಿ ಕಳುಹಿಸಿದ್ದ ಕೂದಲು ಮಾದರಿ ವಾಪಸು ಬಂದಿತ್ತು. ಅವೈಜ್ಞಾನಿಕ ಮಾದರಿ ಎಂದು ವಿಧಿವಿಜ್ಞಾನ ತಜ್ಞರು ಅಭಿಪ್ರಾಯಪಟ್ಟಿದ್ದರು.

ಹೀಗಾಗಿ, ಎರಡನೇ ಬಾರಿ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದೀಗ ಅದರ ವರದಿ ಬಂದಿದೆ.

ADVERTISEMENT

'ರಾಗಿಣಿ, ಸಂಜನಾ ಹಾಗೂ ಇತರೆ ಕೆಲ ಆರೋಪಿಗಳು ಡ್ರಗ್ಸ್ ಸೇವನೆ ಮಾಡಿದ್ದು ವರದಿಯಿಂದ ಗೊತ್ತಾಗಿದೆ. ಇದೇ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು' ಎಂದು ಸಿಸಿಬಿ‌ ಮೂಲಗಳು ಹೇಳಿವೆ.

ಹಲವು ದಿನ ಜೈಲು ವಾಸ ಅನುಭವಿಸಿದ್ದ ನಟಿಯರು ಹಾಗೂ ಇತರರು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.