ADVERTISEMENT

ಭಜರಂಗಿ 2 ಟ್ರೈಲರ್ ಬಿಡುಗಡೆ: ಫ್ಯಾಂಟಸಿಯಲ್ಲಿ ಮೋಡಿ ಮಾಡಿದ ಶಿವಣ್ಣ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಅಕ್ಟೋಬರ್ 2021, 4:25 IST
Last Updated 21 ಅಕ್ಟೋಬರ್ 2021, 4:25 IST
   

ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ಗೆ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಭಜರಂಗಿ 2'ಟ್ರೈಲರ್ ಬಿಡುಗಡೆಯಾಗಿದ್ದು, ಯೂಟ್ಯೂಬ್‌ನಲ್ಲಿ ಸಂಚಲನ ಸೃಷ್ಟಿಸಿದೆ. ಆನಂದ್ ಆಡಿಯೊ ಯೂಟ್ಯೂಬ್‌ ಚಾನೆಲ್‌ನಲ್ಲಿ ಟ್ರೈಲರ್‌ ಲಭ್ಯವಿದೆ.

ಫ್ಯಾಂಟಸಿ ಸ್ವರೂಪದಮೇಕಿಂಗ್ ಹಾಗೂ ವಿಶೇಷ ಸೆಟ್‌ಗಳಿಂದ ಕಂಗೊಳಿಸುತ್ತಿರುವ ಚಿತ್ರದ ಟ್ರೈಲರ್‌ನಲ್ಲಿ ಹಿನ್ನೆಲೆ ಸಂಗೀತ ಅದ್ಭುತವಾಗಿ ಮೂಡಿ ಬಂದಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಒಂದು ಮಿಲಿಯನ್‌ಗೂ ಅಧಿಕ ವೀಕ್ಷಣೆ ಕಂಡಿದೆ. ಶಿವರಾಜ್‌ಕುಮಾರ್, ಭಾವನಾ ಮೆನನ್ ಹಾಗೂ ಸೌರವ್ ಲೊಕೇಶ್ ಅವರ ಪಾತ್ರಗಳು ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿವೆ.

ಜಯಣ್ಣ ಫಿಲಂಸ್‌ ನಿರ್ಮಿಸಿರುವ ‘ಭಜರಂಗಿ 2‘ ಇದೇ ದೀಪಾವಳಿ ಸಂದರ್ಭದಲ್ಲಿ ಅಕ್ಟೋಬರ್ 29 ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ADVERTISEMENT

ಎ. ಹರ್ಷ ನಿರ್ದೇಶನದ ಭಜರಂಗಿ 2 ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತವಿದ್ದು, ನಾಯಕನ ಪಾತ್ರದಲ್ಲಿ ಶಿವರಾಜ್‌ಕುಮಾರ್ ಅಭಿನಯಿಸಿದ್ದರೆ, ಭಾವನ ಮೆನನ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಭಜರಂಗಿ 1 ರಲ್ಲಿ ಮೋಡಿ ಮಾಡಿದ್ದ ಭಜರಂಗಿ ಲೋಕಿ ಖಳಪಾತ್ರದಲ್ಲಿ ಆರ್ಭಟಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.