ADVERTISEMENT

ಭುವನ್ ಗೌಡ ಆರತಕ್ಷತೆಯಲ್ಲಿ ಚಂದನವನದ ತಾರೆಯರ ಸಮಾಗಮ: ಫೋಟೊಸ್ ಇಲ್ಲಿವೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಅಕ್ಟೋಬರ್ 2025, 11:17 IST
Last Updated 28 ಅಕ್ಟೋಬರ್ 2025, 11:17 IST
<div class="paragraphs"><p>ಭುವನ್ ಗೌಡ ಆರತಕ್ಷತೆ ಕಾರ್ಯಕ್ರಮ</p></div>

ಭುವನ್ ಗೌಡ ಆರತಕ್ಷತೆ ಕಾರ್ಯಕ್ರಮ

   

ಚಿತ್ರ: ಇನ್‌ಸ್ಟಾಗ್ರಾಮ್

‘ಕೆಜಿಎಫ್ ಚಾಪ್ಟರ್ 1– 2’ ಹಾಗೂ ‘ಸಲಾರ್ 1 ಚಿತ್ರಕ್ಕೆ  ಸಿನಿಮಾಟೋಗ್ರಾಫರ್‌ ಆಗಿ ಕೆಲಸ ಮಾಡಿದ ಭುವನ್ ಗೌಡ ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ADVERTISEMENT

ಅಕ್ಟೋಬರ್ 24ರಂದು ಭುವನ್ ಗೌಡ - ನಿಖಿತಾ  ಅದ್ಧೂರಿಯಾಗಿ ವಿವಾಹ ಆಗಿದ್ದಾರೆ.

ಇದೀಗ ಭುವನ್ ಗೌಡ ಅದ್ಧೂರಿಯಾಗಿ ಆರತಕ್ಷತೆಯನ್ನು ಮಾಡಿಕೊಂಡಿದ್ದಾರೆ.

ಈ ಕಾರ್ಯಕ್ರಮಕ್ಕೆ ಚಂದನವನದ ತಾರೆಯರು ಭಾಗಿಯಾಗಿ ನವ ಜೋಡಿಗೆ ಶುಭ ಹಾರೈಸಿದ್ದಾರೆ.

ನಿಖಿತಾ ಹಾಗೂ ಭುವನ್ ಗೌಡ ಆರತಕ್ಷತೆ ಕಾರ್ಯಕ್ರಮದಲ್ಲಿ ನಿರ್ದೇಶಕ ಪ್ರಶಾಂತ್ ನೀಲ್, ನಿಧಿ ಸುಬ್ಬಯ್ಯ, ಶಾನ್ವಿ ಶ್ರೀವಾಸ್ತವ, ಶ್ರೀಲೀಲಾ, ರಾಗಿಣಿ ದ್ವಿವೇದಿ, ದಿಶಾ ಮದನ್, ಪನ್ನಗಾಭರಣ, ಅಮೃತಾ ಅಯ್ಯಂಗಾರ್, ಹರ್ಷಿಕಾ ಪೂಣಚ್ಚ ದಂಪತಿ ಸೇರಿದಂತೆ ಸಾಕಷ್ಟು ತಾರೆಯರು ಬಂದಿದ್ದರು.

ಭುವನ್ ಗೌಡ ತಮ್ಮ ಆರತಕ್ಷತೆಯ ಫೋಟೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಇದೇ ಫೋಟೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.

ಈ ನವ ಜೋಡಿ ಬ್ಲಾಕ್‌ ಟು  ಬ್ಲಾಕ್‌ ಬಟ್ಟೆಯಲ್ಲಿ ಮಿಂಚಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.