
ಮಲ್ಲಮ್ಮ
ಚಿತ್ರ: ಇನ್‌ಸ್ಟಾಗ್ರಾಂ
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 12 ಇತ್ತೀಚೆಗೆ ಅದ್ಧೂರಿಯಾಗಿ ಅಂತ್ಯ ಕಂಡಿತ್ತು. ಬಿಗ್‌ಬಾಸ್ ಕಾರ್ಯಕ್ರಮದಿಂದ ಸಾಕಷ್ಟು ಸ್ಪರ್ಧಿಗಳು ಜನಪ್ರಿಯತೆ ಪಡೆದುಕೊಂಡು, ಸಿನಿಮಾ, ಧಾರಾವಾಹಿ ಕಡೆ ಮುಖ ಮಾಡಿದ್ದಾರೆ. ಇದೀಗ ಅದೇ ಸಾಲಿನಲ್ಲಿದ್ದಾರೆ ಮಾತಿನ ಮಲ್ಲಿ ಮಲ್ಲಮ್ಮ.
ಬಿಗ್‌ಬಾಸ್‌ನಿಂದ ಮಲ್ಲಮ್ಮಗೆ ಅದೃಷ್ಟ ಖುಲಾಯಿಸಿದೆ. ಸೀಸನ್ 12ನೇ ಆವೃತ್ತಿಗೆ ಸ್ಪರ್ಧಿಯಾಗಿ ಹೋಗಿದ್ದ ಮಲ್ಲಮ್ಮ ತಮ್ಮ ಮಾತಿನ ಶೈಲಿ, ಮುಗ್ಧತೆಯಿಂದಲೇ ಎಲ್ಲರ ಗಮನ ಸೆಳೆದಿದ್ದರು. ಇದೀಗ ಮಲ್ಲಮ್ಮ ಅವರು ಸಿನಿಮಾವೊಂದರಲ್ಲಿ ನಟಿಸಲು ಸಜ್ಜಾಗಿದ್ದರೆ. ಜೊತೆಗೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.
ಮಲ್ಲಮ್ಮ
ಬಹುತೇಕ ಹೊಸಬರೇ ಸೇರಿಕೊಂಡು ನಟಿಸುತ್ತಿರುವ ‘ವಿನಾಶ ಕಾಲೆ’ ಎಂಬ ಸಿನಿಮಾದಲ್ಲಿ ಮಲ್ಲಮ್ಮ ಅವರು ನಟಿಸುವುದಕ್ಕೆ ಸಜ್ಜಾಗಿದ್ದಾರೆ. ಈ ಹಿಂದೆ ಬಿಗ್‌ಬಾಸ್ ಮನೆಯಲ್ಲಿ ಮಲ್ಲಮ್ಮ ಅವರನ್ನು ಸ್ಪರ್ಧಿಗಳು ತಾಯಿಯಂತೆ ನೋಡಿಕೊಳ್ಳುತ್ತಿದ್ದರು. ಮಲ್ಲಮ್ಮ ಕೂಡ ಅವರನ್ನು ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಇದೀಗ ವಿನಾಶ ಕಾಲೆ ಸಿನಿಮಾದಲ್ಲೂ ತಾಯಿ ಪಾತ್ರ ಮಾಡುತ್ತಿದ್ದಾರೆ.
ಈಗಾಗಲೇ ಸಿನಿಮಾ ಚಿತ್ರೀಕರಣ ಆರಂಭಗೊಂಡಿದ್ದು, ಮಲ್ಲಮ್ಮ ಅವರು ಸದ್ಯ ನಟನೆ ಕಲಿಯುತ್ತಿದ್ದಾರೆ. ವಿನಾಶ ಕಾಲೆ ಸಿನಿಮಾವನ್ನು ಕಿರಣ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಮಲ್ಲಮ್ಮ ಮಾತ್ರವಲ್ಲದೆ ಕರಿಬಸಪ್ಪ, ಡಾಗ್ ಸತೀಶ್ ಸೇರಿದಂತೆ ಹಲವರು ಇದ್ದಾರೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.