ADVERTISEMENT

ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ vs ರಘು: ದೂರ ಆಗ್ತಾರ ದೋಸ್ತಿಗಳು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಡಿಸೆಂಬರ್ 2025, 6:57 IST
Last Updated 1 ಡಿಸೆಂಬರ್ 2025, 6:57 IST
   

ಬಿಗ್‌ಬಾಸ್ 12ನೇ ಆವೃತ್ತಿಯ ಅರ್ಧದಷ್ಟು ದಿನಗಳು ಮುಕ್ತಾಯಗೊಂಡಿದೆ. ದಿನ ಕಳೆದಂತೆ ಸ್ಪರ್ಧಿಗಳ ನಡುವೆ ಮಾತಿನ ಚಕಮಕಿ ಜೋರಾಗುತ್ತಿದೆ. ಇದೀಗ ಇಷ್ಟು ದಿನ ಆತ್ಮೀಯ ಸ್ನೇಹಿತರಾಗಿದ್ದ ರಘು ಹಾಗೂ ಗಿಲ್ಲಿ ಜಗಳಕ್ಕಿಳಿದಿದ್ದಾರೆ.

ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿರುವ ಸಾಮಾಜಿಕ ಮಾಧ್ಯಮದ ಪ್ರೊಮೋದಲ್ಲಿ, ಕ್ಯಾಪ್ಟನ್ ಧನುಷ್ ಅವರು ಮನೆಯ ಎಲ್ಲಾ ಸದಸ್ಯರಿಗೆ 1ರಿಂದ 11ವರೆಗೆ ರ‍್ಯಾಂಕಿಂಗ್ ನೀಡುವ ಚಟುವಟಿಕೆ ಒಂದನ್ನು ಬಿಗ್‌ಬಾಸ್ ನೀಡಿದ್ದಾರೆ.

ಅದರಂತೆ ಮನೆಯ ಕ್ಯಾಪ್ಟನ್ ಧನುಷ್ ಅವರು,  ಗಿಲ್ಲಿಗೆ 2ನೇ ಸ್ಥಾನ,  ಅಶ್ವಿನಿ ಗೌಡಗೆ 3ನೇ ಸ್ಥಾನ, ರಕ್ಷಿತಾಗೆ 4ನೇ ಸ್ಥಾನ, ಅಭಿಷೇಕ್ 5ನೇ ಸ್ಥಾನ, ರಘು ಅವರಿಗೆ 6ನೇ ಸ್ಥಾನ ನೀಡಿದ್ದರು.

‘ಮನೆಯ ಕೆಲಸದ ಮಾಡದ ಗಿಲ್ಲಿಗೆ ಯಾವ ಆಧಾರದಲ್ಲಿ 2ನೇ ಸ್ಥಾನ ನೀಡಿದ್ದೀರಾ’ ? ಎಂದು ರಘು ಪ್ರಶ್ನಿಸುತ್ತಾರೆ.

ಇದಕ್ಕೆ ಕೋಪಗೊಂಡ ಗಿಲ್ಲಿ ಅವರು ರಘು ಅವರ ಹತ್ತಿರ ಜಗಳಕ್ಕೆ ಹೋಗುತ್ತಾರೆ.

ಬಿಗ್‌ಬಾಸ್ ಮನೆಯಲ್ಲಿ  ಸ್ನೇಹಿತರಾಗಿದ್ದ ಗಿಲ್ಲಿ ಹಾಗೂ ರಘು ನಡುವೆ ರ‍್ಯಾಂಕಿಂಗ್ ವಿಚಾರ ದ್ವೇಷಕ್ಕೆ ಕಾರಣವಾಯಿತಾ? ಎಂದು ಇಂದಿನ ಸಂಚಿಕೆಯಲ್ಲಿ ನೋಡಬೇಕಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.