
ಕನ್ನಡ ಬಿಗ್‌ಬಾಸ್ 12ನೇ ಆವೃತ್ತಿಯು ಫಿನಾಲೆ ಹಂತದಲ್ಲಿದೆ. ಅದರ ನಡುವೆ ಬಿಗ್‌ಬಾಸ್ ಮನೆಯ ಸದಸ್ಯರಿಗೆ ಜೀವನದ ಕಷ್ಟದ ದಿನಗಳನ್ನು ಹಂಚಿಕೊಳ್ಳಲು ವೇದಿಕೆ ನೀಡಲಾಗಿದೆ. ನೋವಿನ ದಿನಗಳನ್ನು ಸ್ಪರ್ಧಿಗಳು ನೆನೆದು ಭಾವುಕರಾಗಿದ್ದಾರೆ.
ಕಷ್ಟ ದಿನಗಳನ್ನು ನೆನೆದ ಗಿಲ್ಲಿ ನಟ, ‘ಅನೇಕರು ಚಿನ್ನ ಆಭರಣಗಳನ್ನು ಕದಿಯುತ್ತಾರೆ. ಆದರೆ ನಾನು ಹಸಿವು ತಾಳಲಾರದೆ ಅನ್ನ ಕದಿಯುತ್ತಿದ್ದೆ. ಊಟ ಮತ್ತು ಮಲಗುವ ಜಾಗಕೋಸ್ಕರ ಒದ್ದಾಡಿದ್ದೆ‘ ಎಂದು ಹೇಳಿಕೊಂಡಿದ್ದಾರೆ.
ನೋವಿನ ದಿನ ನೆನೆದ ಧನುಷ್, ‘ನಟನೆ ಅಂದರೆ ನನಗೆ ಇಷ್ಟ. ಎಷ್ಟೋ ಜನ ಅವಕಾಶ ಸಿಗದೇ ವಂಚಿತರಾಗಿದ್ದಾರೆ. ನಾನು ಕೂಡ ಆ ಭರವಸೆಯನ್ನು ಕಳೆದುಕೊಂಡು ನಟನೆಯಿಂದ ಹಿಂದೆ ಸರಿಯುವ ಯೋಚನೆ ಮಾಡಿದ್ದೆ’ ಎಂದಿದ್ದಾರೆ.
ಜೀವನದ ಕಣ್ಣೀರಿನ ಕಥೆ ಹಂಚಿಕೊಂಡ ಕಾವ್ಯ, ‘ನಾನಿಂದು ನಟಿ ಆಗಿರಬಹುದು. ಆದರೆ ಒಂದು ಕಾಲದಲ್ಲಿ ಅಕ್ಕಿ, ಹಾಲು ಸೇರಿದಂತೆ ಕನಿಷ್ಠ ದಿನಸಿ ವಸ್ತುಗಳನ್ನು ತರಲು ನಮ್ಮ ಹಣ ಇರುತ್ತಿರಲಿಲ್ಲ’ ಎಂದು ಬಡತನದ ದಿನಗಳನ್ನು ನೆನೆದು ಕಣ್ಣೀರಿಟ್ಟಿದ್ದಾರೆ.
ಕಷ್ಟ ನೋವು, ಬಡತನ, ಕಣ್ಣೀರಿನ ಕಥೆ ಆಲಿಸಿದ ರಘು, ರಕ್ಷಿತಾ, ಅಶ್ವಿನಿ ಅವರು ಭಾವುಕರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.