ADVERTISEMENT

BBK12: ಕಾವ್ಯಾಳ ಬೆನ್ನಿಗೆ ಚೂರಿ ಹಾಕಿದ ರಕ್ಷಿತಾ: ಏಟು ಎದುರೇಟು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಡಿಸೆಂಬರ್ 2025, 13:00 IST
Last Updated 1 ಡಿಸೆಂಬರ್ 2025, 13:00 IST
   

ಬಿಗ್‌ಬಾಸ್ 12ನೇ ಆವೃತ್ತಿ ದಿನೇ ದಿನೇ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಮಿತ್ರರಾಗಿದ್ದವರು ಶತ್ರುಗಳಾಗುತ್ತಿದ್ದಾರೆ. ಇದೀಗ ಕಲರ್ಸ್ ಕನ್ನಡ ಬಿಡುಗಡೆ ಮಾಡಿರುವ ಪ್ರೊಮೋದಲ್ಲಿ  ಕಾವ್ಯಾ ಹಾಗೂ ರಕ್ಷಿತಾ ನಡುವಿನ ಮಾತಿನ  ಜಟಾಪಟಿ ನಡೆದಿದೆ.

ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿರುವ ಸಾಮಾಜಿಕ ಮಾಧ್ಯಮದ ಪ್ರೊಮೋದಲ್ಲಿ, ಸದಸ್ಯರಿಗೆ ಬಿಗ್‌ಬಾಸ್ ಮನೆಯಲ್ಲಿ ಇರಲು ಯೋಗ್ಯತೆ ಇರದ ಸ್ಪರ್ಧಿಯನ್ನು ಆಯ್ಕೆ ಮಾಡಿ ನಂತರ ಅವರು ಬೆನ್ನಿಗೆ ಹಾಕಿರುವ ಶೀಟ್‌ಗೆ ಚೂರಿ ಚುಚ್ಚುವ ಚಟುವಟಿಕೆ ನೀಡಿದ್ದರು.

ಅದರಂತೆ, ರಘು ಅವರು ಗಿಲ್ಲಿಯನ್ನು ಆಯ್ಕೆ ಮಾಡಿಕೊಂಡಿದ್ದರೆ, ರಕ್ಷಿತಾ ಅವರು ಕಾವ್ಯ ಅವರನ್ನು ಆಯ್ಕೆ ಮಾಡಿಕೊಂಡು, ‘ನೀವು ನನಗೆ ಸರಿಯಾದ ಪ್ರತಿಸ್ಪರ್ಧಿ ಅಲ್ಲ. ಸ್ಟ್ರಾಟಜಿ ಚೆನ್ನಾಗಿ ಮಾಡುತ್ತಿರಾ ಎಂದು ಕಾವ್ಯ ಅವರ ಶೀಟ್‌ಗೆ ಚೂರಿ ಚುಚ್ಚಿದ್ದಾರೆ.

ಇದಕ್ಕೆ ಕೋಪಗೊಂಡ ಕಾವ್ಯ ಅವರು, ರಕ್ಷಿತಾ ಅವರಿಗೆ ‘ನಿನಗೆ ಧೈರ್ಯ ಇದ್ದರೆ ನನ್ನ ಎದುರಿಗೆ ನಿಂತು ಮಾತನಾಡು ಎಂದು ಸವಾಲ್ ಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT