ADVERTISEMENT

ಮಹಾರಾಷ್ಟ್ರ ಸರ್ಕಾರವನ್ನು ಪಾಕಿಸ್ತಾನ, ಬಾಬರ್ ಸೈನ್ಯಕ್ಕೆ ಹೋಲಿಸಿದ ನಟಿ ಕಂಗನಾ

ಕಚೇರಿ ಧ್ವಂಸ ಪ್ರಕರಣ

ಏಜೆನ್ಸೀಸ್
Published 9 ಸೆಪ್ಟೆಂಬರ್ 2020, 8:04 IST
Last Updated 9 ಸೆಪ್ಟೆಂಬರ್ 2020, 8:04 IST
ನಟಿ ಕಂಗನಾ ರನೌತ್
ನಟಿ ಕಂಗನಾ ರನೌತ್   

ಮುಂಬೈ: ತಮ್ಮ ಕಚೇರಿ ಕಟ್ಟಡವನ್ನು ಕೆಡವಲು ಮುಂದಾಗಿರುವ ಮಹಾರಾಷ್ಟ್ರ ಸರ್ಕಾರ ಮತ್ತು ಬಿಎಂಸಿ (ಬ್ರುಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್) ಅನ್ನು ಬಾಲಿವುಡ್‌ ನಟಿ ಕಂಗನಾ ರನೌತ್‌, ಪಾಕಿಸ್ತಾನ ಮತ್ತು ಬಾಬರ್ ಸೈನ್ಯಕ್ಕೆ ಹೋಲಿಸಿ ಟ್ವೀಟ್‌ ಮಾಡಿದ್ದಾರೆ.

ನಟಿ ಕಂಗನಾ ಮತ್ತು ಆಡಳಿತಾರೂಢ ಶಿವಸೇನೆ ನಡುವಿನ ಜಗಳದ ಮಧ್ಯೆ ಇದೀಗ ಕಂಗನಾ ಅವರ ಮುಂಬೈ ಬಂಗ್ಲೆಗೆ ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ) ನೋಟಿಸ್ ಅಂಟಿಸಿದ್ದು, ಕಂಗನಾ ಸೂಕ್ತ ಅನುಮತಿ ಪಡೆಯದೇ ಬಂಗ್ಲೆಯ ಆವರಣದಲ್ಲಿ ಅನೇಕ ಮಾರ್ಪಾಡುಗಳನ್ನು ಮಾಡಿದ್ದಾರೆ ಎಂದು ಬಿಎಂಸಿ ಹೇಳಿದೆ.

ಬಿಎಂಸಿ ಕ್ರಮ ಖಂಡಿಸಿ ಕಂಗನಾ ಸರಣಿ ಟ್ವೀಟ್‌ ಮಾಡಿದ್ದು, ‘ನಾನು ಎಂದಿಗೂ ತಪ್ಪು ಮಾಡಿಲ್ಲ. ಆದರೆ ನನ್ನ ಶತ್ರುಗಳು ಮತ್ತೆ ಮತ್ತೆ ಸಾಬೀತುಪಡಿಸಲು ಮುಂದಾಗಿದ್ದಾರೆ. ಇದೀಗ ನನ್ನ ಮುಂಬೈ ಪಿಒಕೆ ರೀತಿಯಾಗಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ಬಾಂದ್ರಾ ಉಪನಗರದ ಪಾಲಿ ಹಿಲ್ಸ್‌ನಲ್ಲಿರುವ ಕಂಗನಾ ಅವರ ಬಂಗ್ಲೆಯನ್ನು ಎರಡು ದಿನಗಳಿಂದ ಬಿಎಂಸಿ ಅಧಿಕಾರಿಗಳು ತಪಾಸಣೆ ನಡೆಸಿದ್ದರು. ಬುಧವಾರ ಪಾಲಿಕೆ ಕಾರ್ಮಿಕರ ತಂಡದೊಂದಿದೆ ಬಂಗ್ಲೆಗೆ ಭೇಟಿ ನೀಡಿದ ಅಧಿಕಾರಿಗಳು ಕಟ್ಟಡ ಕೆಡವಲು ಸೂಚಿಸಿದ್ದಾರೆ.

ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ(ಪಿಒಕೆ) ಹೋಲಿಸಿದ್ದ ಕಂಗನಾ, ಮೂವಿ ಮಾಫಿಯಾಗಿಂತ ನಾನು ಮುಂಬೈ ಪೊಲೀಸರನ್ನು ಕಂಡರೆ ಹೆದರುತ್ತೇನೆ. ನಾನು ಹಿಮಾಚಲ ಪ್ರದೇಶ ಅಥವಾ ಕೇಂದ್ರದಿಂದ ಭದ್ರತೆ ಪಡೆಯಲು ಬಯಸುತ್ತೇನೆ ಎಂದು ಇತ್ತೀಚೆಗೆ ಟ್ವೀಟ್‌ ಮಾಡಿದ್ದರು. ಇದು ಸಾಕಷ್ಟು ವಿವಾದವನ್ನುಂಟು ಮಾಡಿತ್ತು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.