ADVERTISEMENT

ಮುಂಬೈ ಮೆಟ್ರೊದಲ್ಲಿ ಹೃತಿಕ್‌ ರೋಷನ್‌ ಪ್ರಯಾಣ: ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಅಕ್ಟೋಬರ್ 2023, 11:21 IST
Last Updated 13 ಅಕ್ಟೋಬರ್ 2023, 11:21 IST
<div class="paragraphs"><p>ಹೃತಿಕ್‌ ರೋಷನ್‌</p></div>

ಹೃತಿಕ್‌ ರೋಷನ್‌

   

hrithikroshan ಇನ್‌ಸ್ಟಾಗ್ರಾಮ್‌ ಚಿತ್ರ

ಮುಂಬೈ: ಶೂಟಿಂಗ್‌ಗೆ ತೆರಳುವ ವೇಳೆ ಮುಂಬೈ ಮೆಟ್ರೊದಲ್ಲಿ ಪ್ರಯಾಣ ಮಾಡಿರುವ ಬಾಲಿವುಡ್‌ ನಟ ಹೃತಿಕ್‌ ರೋಷನ್‌, ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ  ಪೋಟೊಗಳನ್ನು ಹಂಚಿಕೊಂಡಿದ್ದಾರೆ.

ADVERTISEMENT

ಮೆಟ್ರೊದಲ್ಲಿ ಹೃತಿಕ್‌ ನೋಡಿ ಜನರು ಖುಷಿಯಿಂದ ಮುಗಿಬಿದ್ದು ಸೆಲ್ಫಿಗೆ ತೆಗೆಸಿಕೊಂಡಿದ್ದಾರೆ. ಮೆಟ್ರೊದ ಕೊನೆಯ ಬೋಗಿಯಲ್ಲಿ ನಿಂತು ಹೃತಿಕ್‌ ಪ್ರಯಾಣ ಮಾಡಿದ್ದಾರೆ. 

ಸಾಮಾಜಿಕ ಜಾಲತಾಣದಲ್ಲಿ ಫೋಟೊ ಹಂಚಿಕೊಂಡಿರುವ ಅವರು, ‘ಕೆಲಸಕ್ಕೆ ಹೋಗುವ ವೇಳೆ ಮೆಟ್ರೊದಲ್ಲಿ ಪ್ರಯಾಣಿಸಿದೆ, ಪ್ರೀತಿಯ ಅಭಿಮಾನಿಗಳನ್ನು ಭೇಟಿಯಾದೆ, ಅದರ ಬಗ್ಗೆ ಹಂಚಿಕೊಳ್ಳುತ್ತಿದ್ದೇನೆ, ಮೆಟ್ರೊ ಪ್ರಯಾಣದ ಅನುಭವ ಅದ್ಭುತವಾಗಿತ್ತು. ನಾನು ಹೋಗುತ್ತಿರುವ ಆಕ್ಷನ್ ಶೂಟ್‌ಗಾಗಿ ಬಿಸಿಲಿನ ಶಾಖ ಮತ್ತು ಟ್ರಾಫಿಕ್‌ ನಡುವಿನ ಸಂಚಾರದಿಂದ ದೂರ ಉಳಿದೆ’ ಎಂದು ಕ್ಯಾಪ್ಶನ್‌ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.