ADVERTISEMENT

ಎಮರ್ಜೆನ್ಸಿ ಫಸ್ಟ್ ಲುಕ್: ಇಂದಿರಾ ಗಾಂಧಿ ಪಾತ್ರದಲ್ಲಿ ಕಂಗನಾ ರನೌತ್

ನಟಿ ಕಂಗನಾ ರನೌತ್ ಅವರ ಹೊಸ ಚಿತ್ರದ ಫಸ್ಟ್‌ ಲುಕ್ ಬಿಡುಗಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಜುಲೈ 2022, 12:30 IST
Last Updated 14 ಜುಲೈ 2022, 12:30 IST
ನಟಿ ಕಂಗನಾ ರನೌತ್ ಅವರ ಹೊಸ ಚಿತ್ರದ ಫಸ್ಟ್‌ ಲುಕ್
ನಟಿ ಕಂಗನಾ ರನೌತ್ ಅವರ ಹೊಸ ಚಿತ್ರದ ಫಸ್ಟ್‌ ಲುಕ್    

ಬೆಂಗಳೂರು: ಬಾಲಿವುಡ್‌ನಲ್ಲಿ ವಿವಾಗಳಿಂದಲೇ ಸುದ್ದಿಯಾಗಿರುವ ನಟಿ ಕಂಗನಾ ರನೌತ್ ಅವರ ಹೊಸ ಚಿತ್ರ ತೆರೆಗೆ ಬರಲು ಸಜ್ಜಾಗಿದೆ.

ಮಣಿಕರ್ಣಿಕಾ ಫಿಲಂಸ್ ನಿರ್ಮಾಣದ ಕಂಗನಾ ರನೌತ್ ನಿರ್ದೇಶನದ ‘ಎಮರ್ಜೆನ್ಸಿ‘ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ.

ಈ ಚಿತ್ರದಲ್ಲಿ ನಟಿ ಕಂಗನಾ ರನೌತ್ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜೀವನಾಧಾರಿತ ಪಾತ್ರವನ್ನು ನಿರ್ವಹಿಸಲಿದ್ದಾರೆ.

ADVERTISEMENT

1975ರ ಜೂನ್ 25ರಂದು ದೇಶದಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿ ಘೋಷಿಸಿದ್ದರು. 1977ರ ಮಾರ್ಚ್‌ 21ರವರೆಗೂ ತುರ್ತು ಪರಿಸ್ಥಿತಿ ಮುಂದುವರಿದಿತ್ತು.

ಆ ಕಾಲದ ಕಥೆಯನ್ನು ಒಳಗೊಂಡಿರುವ ಚಿತ್ರ ‘ಎಮರ್ಜೆನ್ಸಿ‘ಯಲ್ಲಿ ನಟಿ ಕಂಗನಾ ಅವರು ಇಂದಿರಾ ಗಾಂಧಿಯವರ ಪಾತ್ರ ನಿರ್ವಹಿಸುತ್ತಿದ್ದಾರೆ.

ಈ ಮೊದಲು ಕಂಗನಾ ಅವರು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಜೀವನಾಧಾರಿತ ಚಿತ್ರ ‘ತಲೈವಿ‘ ಮತ್ತು ಝಾನ್ಸಿ ರಾಣಿ ಲಕ್ಷ್ಮೀಬಾಯಿ ಜೀವನಾಧಾರಿತ ಚಿತ್ರ ‘ಮಣಿಕರ್ಣಿಕಾ‘ದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.