ADVERTISEMENT

ರಣಬೀರ್‌–ಆಲಿಯಾ ಈಗ ದಂಪತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಏಪ್ರಿಲ್ 2022, 14:08 IST
Last Updated 14 ಏಪ್ರಿಲ್ 2022, 14:08 IST
ರಣಬೀರ್‌ ಕಪೂರ್‌ ಮತ್ತು ಆಲಿಯಾ ಭಟ್‌ ಮುಖವಾಡ ಹಾಕಿರುವ ಗೊಂಬೆಗಳಿಗೆ ಕೋಲ್ಕತ್ತದಲ್ಲಿ ಮದುವೆ ನೆರವೇರಿಸಿದ ಅಭಿಮಾನಿಗಳು
ರಣಬೀರ್‌ ಕಪೂರ್‌ ಮತ್ತು ಆಲಿಯಾ ಭಟ್‌ ಮುಖವಾಡ ಹಾಕಿರುವ ಗೊಂಬೆಗಳಿಗೆ ಕೋಲ್ಕತ್ತದಲ್ಲಿ ಮದುವೆ ನೆರವೇರಿಸಿದ ಅಭಿಮಾನಿಗಳು   

ಮುಂಬೈ: ಬಾಲಿವುಡ್‌ನ ತಾರಾ ಜೋಡಿ ರಣಬೀರ್ ಕಪೂರ್‌ ಮತ್ತು ಆಲಿಯಾ ಭಟ್‌ ಮದುವೆ ಇಂದು ನೆರವೇರಿದೆ. ಬಾಂದ್ರಾದಲ್ಲಿರುವ ರಣಬೀರ್‌ ಅವರ 'ವಾಸ್ತು' ನಿವಾಸದಲ್ಲಿ ಕುಟುಂಬದ ಸದಸ್ಯರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದಾರೆ.

ರಣಬೀರ್‌–ಆಲಿಯಾ ಜೊತೆಯಾಗಿ ಓಡಾಟ ನಡೆಸಿದ್ದರ ಕುರಿತು ಹರಿದಾಡುತ್ತಿದ್ದ ಗುಸುಗುಸು ಮಾತುಗಳಿಗೆ ಈಗ ತೆರೆಬಿದ್ದಿದೆ. ಇಬ್ಬರೂ ಸ್ಟಾರ್‌ಗಳ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳ ಮೂಲಕ ಶುಭಕೋರುತ್ತಿದ್ದಾರೆ. ಸ್ಟಾರ್‌ ದಂಪತಿ ಇಂದು ರಾತ್ರಿ ಮಾಧ್ಯಮಗಳ ಮುಂದೆ ಕಾಣಿಸಿಕೊಳ್ಳುವ ಸಾಧ್ಯತೆ ಇರುವುದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.

ನೀತು ಕಪೂರ್, ರಿಧಿಮಾ ಕಪೂರ್‌ ಸಾಹನಿ, ಕರೀನಾ ಕಪೂರ್‌ ಖಾನ್‌, ಕರಿಷ್ಮಾ ಕಪೂರ್‌, ಮಹೇಶ್‌ ಭಟ್‌, ಸೋನಿ ರಾಜದಾನ್‌, ಶಹೀನ್‌ ಭಟ್‌ ಸೇರಿದಂತೆ ಕುಟುಂಬದ ಸದಸ್ಯರು ಮತ್ತು ಅತ್ಯಾಪ್ತರು ಮಾತ್ರ ಮದುವೆ ಸಮಾರಂಭದಲ್ಲಿ ಭಾಗಿಯಾದರು. ಮದುವೆ ಕಾರ್ಯಕ್ರಮ ಸಂಜೆ 5:15ಕ್ಕೆ ಪೂರ್ಣಗೊಂಡಿರುವುದಾಗಿ ತಿಳಿದು ಬಂದಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.