ADVERTISEMENT

'ಕೇವಲ ₹ 500ಕ್ಕೆ ಹೊಸ ಹೀರೋ': ಸಾನಿಯಾ ಮಗನ ಫೋಟೊ ಹಂಚಿಕೊಂಡ ಬಾಲಿವುಡ್ ನಿರ್ದೇಶಕಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಏಪ್ರಿಲ್ 2022, 6:45 IST
Last Updated 30 ಏಪ್ರಿಲ್ 2022, 6:45 IST
ಫರ್‍ಹಾ ಖಾನ್‌
ಫರ್‍ಹಾ ಖಾನ್‌   

ಬಾಲಿವುಡ್‌ ನಿರ್ದೇಶಕಿ ಫರ್‍ಹಾ ಖಾನ್‌ ಅವರು, ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರ ಮಗನೊಂದಿಗಿನ ಮುದ್ದಾದ ಚಿತ್ರವೊಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಸಾನಿಯಾ ಪುತ್ರ ಇಝಾನ್‌ ಮಿರ್ಜಾ ಮಲಿಕ್‌ನನ್ನು'ನವ ನಾಯಕ' ಎಂದು ಪರಿಚಯಿಸಿರುವ ಫರ್‍ಹಾ, 'ಅತ್ಯಂತ ಅಗ್ಗದ ಬೆಲೆಗೆ ಹೊಸ ಹೀರೊ ಸಿಕ್ಕಿದ್ದಾನೆ.ಇಝಾನ್‌ ಮಿರ್ಜಾ ಮಲಿಕ್‌. ಈ ಸುಂದರಾಂಗ ಕೇವಲ ₹ 500ಕ್ಕೆ ನನಗೆ ಸಹಿ ಮಾಡಿದ್ದಾನೆ. ರಿಯಾಯಿತಿಗಾಗಿ ಸಾನಿಯಾ ಮಿರ್ಜಾಗೆ ಧನ್ಯವಾದಗಳು' ಎಂದು ಬರೆದುಕೊಂಡಿದ್ದಾರೆ.

ಶುಕ್ರವಾರ ಹಂಚಿಕೆಯಾಗಿರುವ ಫರ್‍ಹಾ ಅವರ ಈ ಪೋಸ್ಟ್‌ ಅನ್ನು ಇದುವರೆಗೆ 12 ಸಾವಿರಕ್ಕೂ ಹೆಚ್ಚು ಜನರು ಮೆಚ್ಚಿಕೊಂಡಿದ್ದಾರೆ. ಸಾನಿಯಾ ಮಿರ್ಜಾ ಕೂಡ ಹೃದಯದ ಎಮೋಜಿಗಳನ್ನು ಹಾಕಿ ಪ್ರತಿಕ್ರಿಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.