
ಐಶ್ವರ್ಯ ಸರ್ಜಾ, ಹಾಸ್ಯನಟ ಬ್ರಹ್ಮಾನಂದಂ
ಚಿತ್ರ: ಇನ್‌ಸ್ಟಾಗ್ರಾಂ
ಪದ್ಮಶ್ರೀ ಪುರಸ್ಕೃತ, ತೆಲುಗು ಚಿತ್ರರಂಗದ ಖ್ಯಾತ ಹಾಸ್ಯ ನಟ ಬ್ರಹ್ಮಾನಂದಂ ಅವರು ವೇದಿಕೆ ಮೇಲೆ ನಟಿ ಐಶ್ವರ್ಯಾ ಸರ್ಜಾಗೆ ವಿಶೇಷ ಉಡುಗೊರೆಯೊಂದನ್ನು ಕೊಟ್ಟಿದ್ದಾರೆ. ಇತ್ತೀಚೆಗೆ ನಡೆದ ಸೀತಾ ಪಯಣಂ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮವೊಂದರಲ್ಲಿ ಈ ಉಡುಗೊರೆ ಕೊಟ್ಟಿದ್ದಾರೆ.
ಫೆ.10ರಂದು ಅರ್ಜುನ್ ಸರ್ಜಾ ಅವರ ಮಗಳು ನಟಿ ಐಶ್ವರ್ಯಾ ಅವರ ಹುಟ್ಟುಹಬ್ಬವಿತ್ತು. ಅದೇ ದಿನ ನಟಿ ಐಶ್ವರ್ಯಾ ನಟನೆಯ ಸೀತಾ ಪಯಣಂ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದೇ ಈವೆಂಟ್‌ಗೆ ತೆಲುಗು ಚಿತ್ರರಂಗದ ಖ್ಯಾತ ಹಾಸ್ಯ ನಟ ಬ್ರಹ್ಮಾನಂದಂ ಅತಿಥಿಯಾಗಿ ಬಂದಿದ್ದರು.
ಆಗ ನಟಿ ಐಶ್ವರ್ಯಾ ಅವರಿಗೆ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ಬಳಿಕ ನಿನಗೊಂದು ಉಡುಗೊರೆ ಕಾದಿದೆ ಎಂದು ಹೇಳುತ್ತಾ ತಾವೇ ಕೈಯಾರೆ ಬಿಡಿಸಿದ ಶ್ರೀರಾಮ ಮತ್ತು ಹನುಮಂತ ಭಾವಚಿತ್ರದ ಫೋಟೊವನ್ನು ನೀಡಿದ್ದಾರೆ. ಇದೇ ವಿಡಿಯೊವನ್ನು ಬ್ರಹ್ಮಾನಂದಂ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೊ ನೋಡಿದ ಅಭಿಮಾನಿಗಳು ನಟನ ಪೇಂಟಿಂಗ್‌ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ತೆಲುಗು ಚಿತ್ರರಂಗದ ಖ್ಯಾತ ಹಾಸ್ಯ ನಟ ಬ್ರಹ್ಮಾನಂದಂ ತೆರೆ ಮೇಲೆ ಎಲ್ಲರನ್ನೂ ನಗಿಸುತ್ತಾರೆ. ಒಂದು ಸಾವಿರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಖ್ಯಾತಿ ಪಡೆದುಕೊಂಡಿರುವ ಇವರು, ಕೇವಲ ನಟನಲ್ಲದೇ ಒಬ್ಬ ಅದ್ಭುತ ಚಿತ್ರ ಕಲಾವಿದ ಕೂಡ ಆಗಿದ್ದಾರೆ. ಈ ಹಿಂದೆ ವೆಂಕಟೇಶ್ವರ ಸ್ವಾಮಿಯ ಚಿತ್ರ ಬಿಡಿಸಿ ಸುದ್ದಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.