ADVERTISEMENT

ಕಾಳಿ ಮಾತೆ ವಿವಾದ: ಕೆನಡಾದ ಆಗಾ ಖಾನ್‌ ಮ್ಯೂಸಿಯಂ ಕ್ಷಮೆಯಾಚನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಜುಲೈ 2022, 6:48 IST
Last Updated 6 ಜುಲೈ 2022, 6:48 IST
ಕಾಳಿ ಪೋಸ್ಟರ್‌
ಕಾಳಿ ಪೋಸ್ಟರ್‌   

ನವದೆಹಲಿ: ನಟಿ, ನಿರ್ದೇಶಕಿ ಲೀನಾ ಮಣಿಮೇಕಲೈ ಚಿತ್ರಿಸಿರುವ ವಿವಾದಾತ್ಮಕ ‘ಕಾಳಿ‘ ದೇವತೆ ಪೋಸ್ಟರ್​ ಬಗ್ಗೆ ಕೆನಡಾದ ಅಗಾ ಖಾನ್​ ಮ್ಯೂಸಿಯಂಹಿಂದೂ ಸಮುದಾಯದವರಲ್ಲಿ ಕ್ಷಮೆ ಕೋರಿದೆ.

ಈ ವಿವಾದಿತ ಪೋಸ್ಟರ್‌ ಬಗ್ಗೆಕೆನಡಾ ಸರ್ಕಾರಕ್ಕೆಭಾರತೀಯ ಹೈಕಮಿಷನರ್​ ದೂರು ಸಲ್ಲಿಸಿದ್ದರು. ಇದಾದ ಬಳಿಕಅಗಾ ಖಾನ್​ ಮ್ಯೂಸಿಯಂ ಕ್ಷಮೆ ಯಾಚಿಸಿ ಟ್ವೀಟ್‌ ಮಾಡಿದೆ.

ಹಿಂದೂ ಧರ್ಮ ಮತ್ತು ಇತರ ಸಮುದಾಯಗಳ ನಂಬಿಕೆಗೆ ಧಕ್ಕೆ ತಂದಿದ್ದಕ್ಕೆ ತೀವ್ರ ವಿಷಾದವಿದೆ. ‘ಅಂಡರ್ ದಿ ಟೆಂಟ್‘ನ 18 ವಿಡಿಯೊಗಳಲ್ಲಿ ಒಂದಾಗಿರುವ ‘ಕಾಳಿ‘ ಸಾಕ್ಷ್ಯಚಿತ್ರದ ಪೋಸ್ಟರ್‌ನಲ್ಲಿ ಕಾಳಿ ದೇವಿಯನ್ನು ತಪ್ಪಾಗಿ ಚಿತ್ರಿಸಿ ಹಿಂದೂ ಸಮುದಾಯಕ್ಕೆ ಘಾಸಿ ಮಾಡಿದೆ. ಈ ಬಗ್ಗೆ ಕ್ಷಮೆ ಕೋರುತ್ತೇವೆ ಎಂದು ಆಗಾ ಖಾನ್‌ ಮ್ಯೂಸಿಯಂ ಟ್ವೀಟ್‌ ಮಾಡಿದೆ.

ADVERTISEMENT

ಲೀನಾ ‘ಕಾಳಿ‘ ಎಂಬ ಸಾಕ್ಷ್ಯಚಿತ್ರ ನಿರ್ಮಾಣ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ಪೋಸ್ಟರ್‌ ಹಂಚಿಕೊಂಡಿದ್ದು ಅದರಲ್ಲಿ ಹಿಂದೂ ದೇವತೆ ಕಾಳಿ ಮಾತೆಯು ಸಿಗರೇಟ್ ಸೇದುತ್ತಿರುವ ಹಾಗೂ ಕೈಯಲ್ಲಿ ಎಲ್‌ಜಿಬಿಟಿಕ್ಯೂ(LGBTQ) ಸಮುದಾಯದ ಧ್ವಜವನ್ನು ಹಿಡಿದಿರುವ ಅವತಾರದಲ್ಲಿ ತೋರಿಸಲಾಗಿದೆ.

ಈ ಪೋಸ್ಟರ್‌ ಹಾಗೂ ಲೀನಾ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.