ಹಾಲ್
ಎಕ್ಸ್ ಚಿತ್ರ
ತಿರುವನಂತಪುರ: ಶೆಯಿನ್ ನಿಗಂ ನಟನೆಯ ಮಲಯಾಳ ಚಲನಚಿತ್ರ ‘ಹಾಲ್’ನಲ್ಲಿ ಆಕ್ಷೇಪಾರ್ಹ ದೃಶ್ಯಗಳಿವೆ ಎಂಬ ಕಾರಣಕ್ಕೆ ಪ್ರಮಾಣಪತ್ರ ನೀಡಲು ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ನಿರಾಕರಿಸಿದೆ.
ದನದ ಮಾಂಸದ ಬಿರಿಯಾನಿ ಸೇವನೆ ಮತ್ತು ಪರ್ದಾ ಧರಿಸಿರುವ ಮಹಿಳೆ ರ್‍ಯಾಪ್ ನೃತ್ಯ ಮಾಡುವ ದೃಶ್ಯಗಳು ಹಾಗೂ ‘ಧ್ವಜ ಪ್ರಣಾಮ’ಕ್ಕೆ ಸಂಬಂಧಿಸಿದ ಹೇಳಿಕೆ ಇರುವುದಕ್ಕೆ ಸಿಬಿಎಫ್‌ಸಿ ಆಕ್ಷೇಪ ವ್ಯಕ್ತಪಡಿಸಿದೆ. ಸುಮಾರು 15 ದೃಶ್ಯಗಳಿಗೆ ಕತ್ತರಿ ಹಾಕುವಂತೆ ಸೂಚಿಸಿದೆ.
ಚಿತ್ರದ ನಿರ್ಮಾಪಕರಾದ ಜೆವಿಜೆ ಪ್ರೊಡಕ್ಷನ್ಸ್, ಸಿಬಿಎಫ್‌ಸಿ ನಿರ್ಧಾರವನ್ನು ಪ್ರಶ್ನಿಸಿ ಕೇರಳ ಹೈಕೋರ್ಟ್ ಮೊರೆ ಹೋಗಿದೆ. ಅರ್ಜಿಯ ವಿಚಾರಣೆ ಮಂಗಳವಾರ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.