ಆ್ಯನ್ ಹ್ಯಾಥ್ ವೇ ಜೊತೆ ವಿಕಾಸ್ ಖನ್ನಾ
ಚಿತ್ರಕೃಪೆ: ಎಕ್ಸ್
ಬೆಂಗಳೂರು: ನ್ಯೂಯಾರ್ಕ್‌ನಲ್ಲಿರುವ ತಮ್ಮ ರೆಸ್ಟೋರೆಂಟ್‌ಗೆ ಭೇಟಿ ನೀಡಿದ ಹಾಲಿವುಡ್‌ನ ಜನಪ್ರಿಯ ನಟಿ ಆ್ಯನ್ ಹ್ಯಾಥ್ ವೇ ಅವರಿಗೆ ಕರ್ನಾಟಕ ಸರ್ಕಾರದ ಜನಪ್ರಿಯ ಸೋಪ್ ಬ್ರ್ಯಾಂಡ್ ‘ಮೈಸೂರು ಸ್ಯಾಂಡಲ್ ಸೋಪ್’ ಅನ್ನು ಭಾರತ ಮೂಲದ ಶೆಫ್ ವಿಕಾಸ್ ಖನ್ನಾ ಉಡುಗೊರೆಯಾಗಿ ನೀಡಿದ್ದಾರೆ.
ಈ ಸಂಬಂಧ ವಿಕಾಸ್ ಖನ್ನಾ ಅವರಿಗೆ ಧನ್ಯವಾದ ತಿಳಿಸಿರುವ ಕಂಪನಿ, ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದೆ.
‘ಹಾಲಿವುಡ್ ನಟಿ ಆ್ಯನ್ ಹ್ಯಾಥ್ ವೇ ಅವರಿಗೆ ಮೈಸೂರು ಸ್ಯಾಂಡಲ್ ಸೋಪ್ ಅನ್ನು ಉಡುಗೊರೆಯಾಗಿ ನೀಡುವ ಮೂಲಕ ಶೆಫ್ ಖನ್ನಾ ಅವರು ಕರ್ನಾಟಕದ ಶ್ರೀಮಂತ ಪರಂಪರೆಯನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಮೈಸೂರು ಸ್ಯಾಂಡಲ್ ಸೋಪ್ ತನ್ನ ಸಾಟಿಯಿಲ್ಲದ ಶುದ್ಧತೆ ಮತ್ತು ಸುಗಂಧದೊಂದಿಗೆ ವಿಶ್ವದಾದ್ಯಂತ ಹೃದಯಗಳನ್ನು ಸಂಪರ್ಕಿಸುವುದನ್ನು ಮುಂದುವರೆಸಲಿದೆ’ ಎಂದು ಹೇಳಿದೆ.
ಮೈಸೂರ್ ಸ್ಯಾಂಡಲ್ ಸೋಪ್ ಜೊತೆಗೆ ಆಗ್ರಾದ ಮಾರ್ಬಲ್ ಬಾಕ್ಸ್, ಮೋನಿಕಾ ಸೈಗಲ್ ಅವರ ‘ಕಿಸ್ ಇನ್ ಕಾಶ್ಮೀರ’ ಪುಸ್ತಕವನ್ನೂ ಶೆಫ್ ಖನ್ನಾ ಅವರು ಹ್ಯಾಥ್ ವೇ ಅವರಿಗೆ ಉಡುಗರೆಯಾಗಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.