ADVERTISEMENT

ಐತಿಹಾಸಿಕ ಪಾತ್ರದಲ್ಲಿ ನಟಿ ರಶ್ಮಿಕಾ: ‘ಛಾವಾ’ ಚಿತ್ರದಲ್ಲಿ ಯಶುಬಾಯಿ ಪಾತ್ರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಜನವರಿ 2025, 7:34 IST
Last Updated 22 ಜನವರಿ 2025, 7:34 IST
<div class="paragraphs"><p>ರಶ್ಮಿಕಾ ಮಂದಣ್ಣ</p></div>

ರಶ್ಮಿಕಾ ಮಂದಣ್ಣ

   

ಬೆಂಗಳೂರು: ಹಲವು ವಿಭಿನ್ನ ಪಾತ್ರಗಳಲ್ಲಿ ಬಣ್ಣ ಹಚ್ಚಿರುವ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಇದೇ ಮೊದಲ ಬಾರಿಗೆ ಐತಿಹಾಸಿಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಛಾವಾ’ ಚಿತ್ರದಲ್ಲಿ ಮಹಾರಾಣಿ ಯಶುಬಾಯಿ ಪಾತ್ರವನ್ನು ರಶ್ಮಿಕಾ ನಿರ್ವಹಿಸಲಿದ್ದಾರೆ.

ನಟ ವಿಕ್ಕಿ ಕೌಶಲ್ ಮುಖ್ಯಪಾತ್ರದಲ್ಲಿ ನಟಿಸಿರುವ ‘ಛಾವಾ’ ಛತ್ರಪತಿ ಸಂಭಾಜಿ ಮಹಾರಾಜ್ ಜೀವನಧಾರಿತ ಕಥೆಯಾಗಿದೆ. ಸಾಂಭಾಜಿ ಮಹಾರಾಜರ ಪತ್ನಿ ಯಶುಬಾಯಿ ಪಾತ್ರಕ್ಕೆ ರಶ್ಮಿಕಾ ಅವರನ್ನು ಚಿತ್ರತಂಡ ಆಯ್ಕೆ ಮಾಡಿದೆ.

ADVERTISEMENT

ರಶ್ಮಿಕಾ ಪಾತ್ರದ ಮೊದಲ ಲುಕ್‌ ಮಂಗಳವಾರ ಬಿಡುಗಡೆಯಾಗಿದ್ದು, ಮಹಾರಾಣಿ ಯಶುಬಾಯಿ ಲುಕ್‌ನಲ್ಲಿ ರಶ್ಮಿಕಾ ಮಿಂಚಿದ್ದಾರೆ.

ಸದ್ಯ ಕಾಲು ನೋವುವಿನಿಂದ ಬಿಡುವು ತೆಗೆದುಕೊಂಡಿರುವ ರಶ್ಮಿಕಾ, ಶೀಘ್ರದಲ್ಲೇ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾಗಿದ್ದ ರಶ್ಮಿಕಾ ನಟನೆಯ ‍ಪುಷ್ಪ–2 ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.