ADVERTISEMENT

‘ಛಪಾಕ್‘ ಟ್ರೇಲರ್ ಬಿಡುಗಡೆ ವೇಳೆ ಕಣ್ಣೀರಾದ ದೀಪಿಕಾ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2019, 11:45 IST
Last Updated 10 ಡಿಸೆಂಬರ್ 2019, 11:45 IST
ಛಪಾಕ್ ಸಿನಿಮಾದ ದೃಶ್ಯ ಒಂದರಲ್ಲಿ ದೀಪಿಕಾ ಪಡುಕೋಣೆ
ಛಪಾಕ್ ಸಿನಿಮಾದ ದೃಶ್ಯ ಒಂದರಲ್ಲಿ ದೀಪಿಕಾ ಪಡುಕೋಣೆ   

ನವದೆಹಲಿ: ಆ್ಯಸಿಡ್ ಸಂತ್ರಸ್ತೆ ಲಕ್ಷ್ಮೀ ಅಗರ್‌ವಾಲ್‌ಅವರ ಬದುಕಿನ ಕಥೆ ಆಧಾರಿತ ‘ಛಪಾಕ್’ ಸಿನಿಮಾದ ಟ್ರೇಲರ್ ಬಿಡುಗಡೆ ವೇಳೆಗುಳಿಕೆನ್ನೆಯ ಬೆಡಗಿ ದೀಪಿಕಾ ಪಡುಕೋಣೆ ಕಣ್ಣೀರಾದರು.

ಸಹ ನಟ ವಿಕ್ರಾಂತ್ ಮಸ್ಸೆ ಮತ್ತು ನಿರ್ದೇಶಕಿ ಮೇಘಾ ಗುಲ್ಜಾರ್ ಅವರೊಂದಿಗೆ ಮುಂಬೈನಲ್ಲಿ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ದೀಪಿಕಾ ಪಡುಕೋಣೆ ಚಿತ್ರದ ಕುರಿತು ಮಾತನಾಡುವ ವೇಳೆ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ದೀಪಿಕಾ ಭಾವುಕರಾಗಿರುವ ಫೋಟೊ ಮತ್ತು ವಿಡಿಯೊಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಛಪಾಕ್ ಚಿತ್ರದಲ್ಲಿ ದೀಪಿಕಾ ನಟಿಸಿರುವ ಪಾತ್ರದ ಹೆಸರು ಮಾಲತಿ. ಆ್ಯಸಿಡ್ ದಾಳಿಗೆ ತುತ್ತಾಗಿ ಬುದುಕುಳಿದ ನಂತರದಪ್ರಯಾಣವನ್ನು ಚಿತ್ರಿಸಲಾಗಿದೆ. ಅಪರಾಧಗಳ ವಿರುದ್ಧದ ಹೋರಾಟ ಮತ್ತು ಆ್ಯಸಿಡ್ ದಾಳಿಗೆ ಒಳಗಾದಸಂತ್ರಸ್ತೆಯರ ಪರವಾಗಿ ನಿಲ್ಲುವ ಮಾಲತಿಯ ಛಲವನ್ನು ಟ್ರೇಲರ್‌ ಬಿಂಬಿಸುತ್ತಿದೆ.

ADVERTISEMENT

ಈ ಮೊದಲು ಚಿತ್ರದ ಫಸ್ಟ್‌ಲುಕ್‌ನಲ್ಲಿಯೇ ದೀಪಿಕಾ, ಲಕ್ಷ್ಮಿಅಗರ್‌ವಾಲ್‌ಅವರಂತೆಯೇ ಗೋಚರಿಸುತ್ತಿದ್ದದ್ದು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಗೆ ಪಾತ್ರವಾಗಿತ್ತು.

ಇನ್ನುಳಿದಂತೆ ಚಿತ್ರದಲ್ಲಿ ವಿಕ್ರಾಂತ್ ಮಸ್ಸೆ ಪ್ರಮುಖ ಪಾತ್ರನಿಭಾಯಿಸಿದ್ದಾರೆ. ನಿಜ ಜೀವನದಲ್ಲಿ ಲಕ್ಷ್ಮಿ ಅಗರ್‌ವಾಲ್ ಅವರ ಪರ ನಿಂತು ನ್ಯಾಯಕ್ಕಾಗಿ ಹೋರಾಡುವ ಪತಿ ಅಮೊಲ್ ದೀಕ್ಷಿತ್ ಅವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

‘ರಾಝಿ’ಯಂಥ ಯಶಸ್ವಿ ಸಿನಿಮಾ ಕೊಟ್ಟ ನಿರ್ದೇಶಕಿ ಮೇಘನಾ ಗುಲ್ಜಾರ್ ನಿರ್ದೇಶಿಸಿರುವ ಚಿತ್ರಕ್ಕೆ ದೀಪಿಕಾ ಮತ್ತು ಫಾಕ್ಸ್ ಸ್ಟಾರ್ ಸ್ಟುಡಿಯೋಸ್ ಸಹ ನಿರ್ಮಾಪಕರಾಗಿದ್ದಾರೆ. ಚಿತ್ರವು ಮುಂದಿನ ವರ್ಷ ಜನವರಿ 10ಕ್ಕೆ ತೆರೆಕಾಣಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.