ADVERTISEMENT

ತೆಲುಗು ನಟ ಮೆಗಾಸ್ಟಾರ್‌ ಚಿರಂಜೀವಿ ಹುಟ್ಟುಹಬ್ಬದಂದು ಹೊಸ ಸಿನಿಮಾ ಘೋಷಣೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಆಗಸ್ಟ್ 2025, 13:46 IST
Last Updated 23 ಆಗಸ್ಟ್ 2025, 13:46 IST
<div class="paragraphs"><p>ಚಿರಂಜೀವಿ </p></div>

ಚಿರಂಜೀವಿ

   

ಹೈದರಾಬಾದ್‌: ತೆಲುಗು ನಟ ಮೆಗಾಸ್ಟಾರ್‌ ಚಿರಂಜೀವಿ ಅವರ ಹುಟ್ಟುಹಬ್ಬದ ಪ್ರಯುಕ್ತ ಹೊಸ ಸಿನಿಮಾ ಘೋಷಿಸಲಾಗಿದೆ.

ಶುಕ್ರವಾರ ಚಿರಂಜೀವಿ ಅವರು 70ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ವೇಳೆ ‌ಇನ್ನೂ ಹೆಸರಿಡದ ನಟನ 158ನೇ ಸಿನಿಮಾವನ್ನು ಚಿತ್ರತಂಡ ಘೋಷಿಸಿದೆ.

ADVERTISEMENT

ಈ ಸಂಬಂಧ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ನಿರ್ದೇಶಕ ಕೆ.ಎಸ್.ರವೀಂದ್ರ, 'ಒಬ್ಬರೇ ಮೆಗಾಸ್ಟಾರ್, ಅವರೊಂದಿಗೆ ಎರಡನೇ ಸಿನಿಮಾ ಇದಾಗಿದೆ' ಎಂದು ಬರೆದುಕೊಂಡಿದ್ದಾರೆ

'ವಾಲ್ತೇರು ವೀರಯ್ಯ' ಚಿತ್ರದ ಬಳಿಕ ಇದೀಗ ನಟ ಚಿರಂಜೀವಿ ಹಾಗೂ ನಿರ್ದೇಶಕ ಕೆ.ಎಸ್.ರವೀಂದ್ರ ಅವರು ಎರಡನೇ ಬಾರಿಗೆ ಜತೆಯಾಗಿದ್ದಾರೆ.

ಚಿರಂಜೀವಿ ಅವರ 157ನೇ ಸಿನಿಮಾದ ಹೆಸರನ್ನು ಶುಕ್ರವಾರ ಅನಾವರಣ ಮಾಡಲಾಗಿದೆ. ಈ ಸಂಬಂಧ ನಿರ್ದೇಶಕ ಅನಿಲ್‌ ರವಿಪುಡಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ಈ ಚಿತ್ರಕ್ಕೆ ‘ಮನ ಶಂಕರ ವರ ಪ್ರಸಾದ್ ಗಾರು‘ ಎಂದು ಹೆಸರಿಡಲಾಗಿದೆ. ಈ ಚಿತ್ರ 2026ರ ಸಂಕ್ರಾಂತಿಯಂದು ಬಿಡುಗಡೆಯಾಗಲಿದೆ.

‘ಮನ ಶಂಕರ ವರ ಪ್ರಸಾದ್ ಗಾರು‘ ಚಿತ್ರದಲ್ಲಿ ಚಿರಂಜೀವಿಗೆ ಜೋಡಿಯಾಗಿ ನಯನತಾರಾ ಕಾಣಿಸಿಕೊಂಡಿದ್ದಾರೆ.

ಹುಟ್ಟುಹಬ್ಬದ ದಿನದಂದು ಅದ್ಭುತ ಕೊಡುಗೆ ನೀಡಿದ್ದಕ್ಕಾಗಿ ‘ಮನ ಶಂಕರ ವರ ಪ್ರಸಾದ್ ಗಾರು‘ ಚಿತ್ರತಂಡಕ್ಕೆ ಧನ್ಯವಾದಗಳು ಎಂದು ಎಕ್ಸ್‌ನಲ್ಲಿ ಚಿರಂಜೀವಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.