ADVERTISEMENT

Chowkidar: ‘ಚೌಕಿದಾರ್‌’ ಸಿನಿಮಾದ ಹಾಡಲ್ಲಿ ತಂದೆ–ಮಗನ ಬಾಂಧವ್ಯ

​ಪ್ರಜಾವಾಣಿ ವಾರ್ತೆ
Published 3 ಜೂನ್ 2025, 0:17 IST
Last Updated 3 ಜೂನ್ 2025, 0:17 IST
ಪೃಥ್ವಿ, ಸಾಯಿಕುಮಾರ್‌ 
ಪೃಥ್ವಿ, ಸಾಯಿಕುಮಾರ್‌    

‘ರಥಾವರ’ ಸಿನಿಮಾ ನಿರ್ದೇಶಿಸಿದ್ದ ಚಂದ್ರಶೇಖರ್‌ ಬಂಡಿಯಪ್ಪ ಆ್ಯಕ್ಷನ್‌ ಕಟ್‌ ಹೇಳಿರುವ, ಪೃಥ್ವಿ ಅಂಬಾರ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಚೌಕಿದಾರ್‌’ ಚಿತ್ರದ ಹಾಡೊಂದು ಬಿಡುಗಡೆಯಾಗಿದೆ. 

ಅಪ್ಪ ಮಗನ ಬಾಂಧವ್ಯದ ಈ ಗೀತೆಯಲ್ಲಿ ಸಾಯಿಕುಮಾರ್ ಹಾಗೂ ಪೃಥ್ವಿ ಅಂಬಾರ್‌ ತಂದೆ–ಮಗನಾಗಿ ಜೊತೆಯಾಗಿದ್ದಾರೆ. ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯದ ಈ ಹಾಡಿಗೆ ಸಚಿನ್ ಬಸ್ರೂರ್ ಸಂಗೀತ ನೀಡಿದ್ದು, ವಿಜಯ್ ಪ್ರಕಾಶ್ ಅವರ ದನಿಯಲ್ಲಿ ಹಾಡು ಮೂಡಿಬಂದಿದೆ.

ಚಿತ್ರದಲ್ಲಿ ಪೃಥ್ವಿಗೆ ಧನ್ಯಾ ರಾಮ್‌ಕುಮಾರ್‌ ಜೋಡಿಯಾಗಿದ್ದಾರೆ. ‘ಚೈತ್ರದ ಪ್ರೇಮಾಂಜಲಿ’ ಚಿತ್ರದ ನಾಯಕಿ ಶ್ವೇತಾ, ಸಾಯಿಕುಮಾರ್‌ ತಾರಾಬಳಗದಲ್ಲಿದ್ದಾರೆ. ಸುಧಾರಾಣಿ ಪೊಲೀಸ್‌ ಅಧಿಕಾರಿಯ ಪಾತ್ರದಲ್ಲಿದ್ದಾರೆ. ‘ಚೌಕಿದಾರ್’ ಸಿನಿಮಾವನ್ನು ಕಲ್ಲಹಳ್ಳಿ ಚಂದ್ರಶೇಖರ್ ನಿರ್ಮಾಣ ಮಾಡುತ್ತಿದ್ದು, ಬಹುಭಾಷೆಯಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.