ADVERTISEMENT

ಯಶ್‌– ದಂಪತಿಯ ಕೊರೊನಾ ಜಾಗೃತಿ ಫೋಟೊ ವೈರಲ್‌

​ಪ್ರಜಾವಾಣಿ ವಾರ್ತೆ
Published 19 ಜೂನ್ 2020, 6:28 IST
Last Updated 19 ಜೂನ್ 2020, 6:28 IST
ರಾಕಿಂಗ್‌ ಫ್ಯಾಮಿಲಿ ಫೋಟೊ
ರಾಕಿಂಗ್‌ ಫ್ಯಾಮಿಲಿ ಫೋಟೊ   

'ನಮ್ಮ ಹೋರಾಟ ಇನ್ನೂ ಮುಗಿದಿಲ್ಲ. ಇದು ಕಷ್ಟದ ಸಮಯ, ಬೇಗ ಕಳೆದು ಹೋಗುತ್ತದೆ. ಅಲ್ಲಿಯವರೆಗೆ ಸುರಕ್ಷತೆಗಾಗಿ ಹೊರಗಡೆ ಹೋದಾಗಲೆಲ್ಲ ಮಾಸ್ಕ್ ಹಾಕ್ಕೊಳ್ಳಿ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಿ..‘

ಇದು ರಾಕಿಂಗ್‌ಸ್ಟಾರ್ ಯಶ್‌ – ರಾಧಿಕಾ ಪಂಡಿತ್‌ ದಂಪತಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಕೊರೊನಾ ವಿರುದ್ಧ ಜಾಗೃತಿ ಮೂಡಿಸುವ ಪೋಸ್ಟ್‌. ಈ ಪೋಸ್ಟ್‌ ಜತೆಗೆ,ನಟ ಯಶ್, ಪತ್ನಿ ರಾಧಿಕಾ ಪಂಡಿತ್ ಮತ್ತು ಪುತ್ರಿ ಐರಾ ಮಾಸ್ಕ್ ಹಾಕಿಕೊಂಡಿರುವ ಫೋಟೊವೂ ಇದೆ.

ಕೊರೊನಾ ಲಾಕ್‌ಡೌನ್‌ನಿಂದಾಗಿ ಮನೆಯಲ್ಲೇ ಕಾಲಕಳೆಯುತ್ತಿರುವ ಯಶ್‌ – ರಾಧಿಕಾ ದಂಪತಿ, ಹಿಂದಿಗಿಂತ ಹೆಚ್ಚು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಈ ಮೊದಲು ಮಕ್ಕಳು, ಕುಟುಂಬದವರೊಟ್ಟಿರುವ ಫೋಟೊಗಳನ್ನಷ್ಟೇ ಹಾಕುತ್ತಿದ್ದ ಈ ದಂಪತಿ, ಈಗ ಸಾಮಾಜಿಕ ಕಳಕಳಿ ಮೂಡಿಸುವುದಕ್ಕೂ ಮುಂದಾಗಿದ್ದಾರೆ. ಈ ಫೋಟೊ ಈಗ ಜಾಲತಾಣಗಳಲ್ಲಿ ವೈರಲ್ ಆಗಿದೆ.

ADVERTISEMENT

ರಾಧಿಕಾ ಪಂಡಿತ್‌ ಈ ಹಿಂದೆಯೂ ತಮ್ಮ ಕುಟುಂಬುದ ಚಟುವಟಿಕೆಗಳನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುತ್ತಿದ್ದರು. ಮಗನಿಗೆ ಆರು ತಿಂಗಳು ತುಂಬಿದಾಗ ಫೋಟೊಶೂಟ್‌ ಮಾಡಿಸಿದ್ದನ್ನೂ ಹಂಚಿಕೊಂಡಿದ್ದರು.ಮಗಳು ಐರಾಗೆ 18 ತಿಂಗಳು ತುಂಬಿದಾಗ ತಮ್ಮನೊಂದಿಗೆ ಆಡುವವಿಡಿಯೊವನ್ನು ಇನ್‌ಸ್ಟಾಗ್ರಾಂಖಾತೆಯಲ್ಲಿಹಂಚಿಕೊಂಡಿದ್ದರು.

ಲಾಕ್‌ಡೌನ್ ಸಡಿಲಗೊಂಡ ನಂತರ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಈ ಕಾರಣದಿಂದಲೇ ಸರ್ಕಾರ ಜನರಿಗೆ ಮುನ್ನೆಚ್ಚರಿಕೆ ವಹಿಸುವಂತೆ ಮನವಿ ಮಾಡುತ್ತಿದೆ. ಈ ಕೆಲಸಕ್ಕೆ ರಾಕಿಂಗ್ ದಂಪತಿ ಸಹ ಕೈ ಜೋಡಿಸುವ ಜತೆಗೆ ತಮ್ಮ ಮಾಸ್ಕ್‌ ತೊಟ್ಟು, ಸುರಕ್ಷತೆ ಇರವಂತೆ ತಮ್ಮ ಅಭಿಮಾನಿಗಳಿಗೂ ಮನವಿ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.