ADVERTISEMENT

ಕ್ರಿಕೆಟಿಗ ಶುಭಮನ್ ಗಿಲ್, ನಟಿ ಸಾರಾ ಅಲಿಖಾನ್‌ ಡೇಟಿಂಗ್‌ ವದಂತಿ: ವಿಡಿಯೊ ವೈರಲ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಆಗಸ್ಟ್ 2022, 9:56 IST
Last Updated 30 ಆಗಸ್ಟ್ 2022, 9:56 IST
ಸಾರಾ, ಗಿಲ್‌
ಸಾರಾ, ಗಿಲ್‌   

ಬಾಲಿವುಡ್ ನಟಿ ಸಾರಾ ಅಲಿ ಖಾನ್ ಮತ್ತು ಕ್ರಿಕೆಟಿಗ ಶುಭಮನ್ ಗಿಲ್ ಡೇಟಿಂಗ್‌ ಮಾಡುತ್ತಿದ್ದಾರೆ ಎಂದು ಬಾಲಿವುಡ್‌ ಅಂಗಳದಲ್ಲಿ ಸುದ್ದಿಗಳು ಹರಿದಾಡುತ್ತಿವೆ.

ಸಾರಾ, ಗಿಲ್‌ ರೆಸ್ಟೋರೆಂಟ್‌ನಲ್ಲಿ ಕಾಲ ಕಳೆಯುತ್ತಿರುವ ವಿಡಿಯೊವನ್ನುಅಭಿಮಾನಿಯೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ನಂತರ ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

ವೈರಲ್ ವಿಡಿಯೊದಲ್ಲಿ ಸಾರಾ ಹಾಗೂ ಶುಭಮನ್ ಡಿನ್ನರ್‌ಗೆ ಆರ್ಡರ್‌ ಮಾಡುವುದನ್ನು ಕಾಣಬಹುದು. ಇಬ್ಬರು ಹೊಟೇಲ್‌ ಸಿಬ್ಬಂದಿಗೆಆಹಾರ ಆರ್ಡರ್ ಮಾಡುತ್ತಿರುವುದನ್ನು ನೋಡಬಹುದು. ನಟಿ ಸಾರಾಪಿಂಕ್ ಡ್ರಸ್‌ನಲ್ಲಿ, ಶುಭಮನ್ ಗಿಲ್ ಬಿಳಿ ಶರ್ಟ್ ಧರಿಸಿರುವುದನ್ನು ಕಾಣಬಹುದು.

ADVERTISEMENT

ಈ ಹಿಂದೆ ಶುಭಮನ್ ಗಿಲ್, ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹರಡಿದ್ದವು. ಇಬ್ಬರೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡು ಸುದ್ದಿಯಾಗಿದ್ದರು.

ಇದೀಗ ಶುಭಮನ್ ಹೆಸರು ಸಾರಾ ಅವರೊಂದಿಗೆ ಥಳಕು ಹಾಕಿಕೊಂಡಿದ್ದು, ಡೇಟ್‌ ಮಾಡುತ್ತಿದ್ದಾರೆ ಎಂಬ ಗಾಳಿ ಮಾತುಗಳು ಹರಿದಾಡುತ್ತಿವೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.