ADVERTISEMENT

ಕಲ್ಟ್ ಚಿತ್ರದ ‘ಹೃದಯವೂ ಕೇಳದೆ’ ಹಾಡಿಗೆ ಪಂಜಾಬಿ ಗಾಯಕ ಜಸ್ಕರಣ್ ಸಿಂಗ್ ಮೆಚ್ಚುಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಜನವರಿ 2026, 12:19 IST
Last Updated 10 ಜನವರಿ 2026, 12:19 IST
   

ಸಚಿವ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ ಹಾಗೂ ಡಿಂಪಲ್ ಕ್ವೀನ್‌ ರಚಿತಾ ರಾಮ್‌ ನಟನೆಯ 'ಕಲ್ಟ್' ಚಿತ್ರದ ‘ಹೃದಯವೂ ಕೇಳದೆ’ ಹಾಡಿಗೆ ‘ದ್ವಾಪರ...’ ಹಾಡಿನ ಮೂಲಕ ಕನ್ನಡಿಗರ ಮನ ಗೆದ್ದಿರುವ ಪಂಜಾಬಿ ಗಾಯಕ ಜಸ್ಕರಣ್ ಸಿಂಗ್ ಮೆಚ್ಚುಗೆ ಸೂಚಿಸಿದ್ದಾರೆ.

ಹಾಡು ಕೆಲ ದಿನಗಳ ಹಿಂದೆ ಬಿಡುಗಡೆಯಾಗಿದೆ. ಈ ಹಾಡಿಗೆ ಗಾಯಕ ನಿಶಾನ್ ರೈ, ದರ್ಶನ್ ಮೆಳವಂಕಿ ಕೂಡಾ ಸೈ ಎಂದಿದ್ದಾರೆ. ‘ಹೃದಯವೂ ಕೇಳದೆ’ ಹಾಡಿಗೆ ಅರ್ಜುನ್ ಜನ್ಯ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.

ಪಂಜಾಬಿ ಗಾಯಕ ಜಸ್ಕರಣ್ ಸಿಂಗ್ ಅವರು ಗೋಲ್ಡನ್ ಸ್ಟಾರ್ ಗಣೇಶ್ ಅವರ  ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ‘ದ್ವಾಪರ’ ಹಾಡನ್ನು ಕೂಡ ಹಾಡಿದ್ದರು.

'ಕಲ್ಟ್' ಚಿತ್ರದಲ್ಲಿ ಝೈದ್ ಖಾನ್ ಹಾಗೂ ನಟಿ ರಚಿತಾ ರಾಮ್, ಮಲೈಕಾ ಟಿ. ವಸುಪಾಲ್ ನಟಿಸಿದ್ದಾರೆ.

ಅನಿಲ್ ಕುಮಾರ್ ನಿರ್ದೇಶನದ  ಈ ಚಿತ್ರವು ಜನವರಿ 23ರಂದು ತೆರೆಕಾಣಲಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.