ADVERTISEMENT

ಝೈದ್‌ ಖಾನ್, ರಚಿತಾ ರಾಮ್ ನಟನೆ ‘ಕಲ್ಟ್‌’ನ ಮತ್ತೊಂದು ಹಾಡು ಬಿಡುಗಡೆಗೆ ಸಿದ್ಧ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಜನವರಿ 2026, 6:39 IST
Last Updated 3 ಜನವರಿ 2026, 6:39 IST
<div class="paragraphs"><p>ನಟ&nbsp;ಝೈದ್‌ ಖಾನ್ ಹಾಗೂ ನಟಿ ರಚಿತಾ ರಾಮ್&nbsp;</p></div>

ನಟ ಝೈದ್‌ ಖಾನ್ ಹಾಗೂ ನಟಿ ರಚಿತಾ ರಾಮ್ 

   

ಚಿತ್ರ: ಇನ್‌ಸ್ಟಾಗ್ರಾಂ

ಸಚಿವ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್‌ ಖಾನ್‌ ಹಾಗೂ ನಟಿ ರಚಿತಾ ರಾಮ್ ನಟನೆಯ ‘ಕಲ್ಟ್‌’ ಸಿನಿಮಾದ 4ನೇ ಹಾಡು ಬಿಡುಗಡೆಗೆ ಸಿದ್ಧವಾಗಿದೆ. ‘ಬನಾರಸ್‌’ ಸಿನಿಮಾ ಬಳಿಕ ‘ಕಲ್ಟ್’ ಸಿನಿಮಾದಲ್ಲಿ ನಟ ಝೈದ್‌ ಖಾನ್‌ ಅವರು ನಟಿಸಿದ್ದಾರೆ.‌

ADVERTISEMENT

ಇದೀಗ ಈ ಸಿನಿಮಾದ ‘ಹೃದಯವು ಕೇಳದೆ’ ಹಾಡು ನಾಳೆ (ಜನವರಿ 4) ಬಿಡುಗಡೆಯಾಗುತ್ತಿದೆ. ಈ ಬಗ್ಗೆ ನಟಿ ರಚಿತಾ ರಾಮ್ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅದರ ಜೊತೆಗೆ ‘ಕಲ್ಟ್‌’ನ ಇತಿಹಾಸಿನಿ ಪಾತ್ರದಲ್ಲಿ ನಟಿಸಲು ಉತ್ಸುಕಳಾಗಿದ್ದೇನೆ. ಧನ್ಯವಾದಗಳು ಅನಿಲ್ ಕುಮಾರ್ ಸರ್ ಈ ಅದ್ಭುತ ಪಾತ್ರ ಕೊಟ್ಟಿದ್ದಕ್ಕೆ. ತಂಡದೊಂದಿಗೆ ಕೆಲಸ ಮಾಡುವುದು ತುಂಬಾ ಇಷ್ಟವಾಯಿತು. ಜನವರಿ 4ರಂದು ಮತ್ತೊಂದು ಹಾಡು ಬಿಡುಗಡೆಯಾಗುತ್ತಿದೆ. ನನ್ನನ್ನು ಬೆಂಬಲಿಸುತ್ತಾ ಇರಿ ಮತ್ತು ಪ್ರೀತಿಸುತ್ತಾ ಇರಿ’ ಎಂದು ಬರೆದುಕೊಂಡಿದ್ದಾರೆ.

‘ಉಪಾಧ್ಯಕ್ಷ’ ಸಿನಿಮಾ ಖ್ಯಾತಿಯ ಅನಿಲ್ ಕುಮಾರ್ ನಿರ್ದೇಶನದ ಕಲ್ಟ್ ಸಿನಿಮಾ ಜನವರಿ 23ರಂದು ತೆರೆಕಾಣಲಿದೆ. ಇತ್ತೀಚೆಗೆ ಕಿತ್ತೂರು ಉತ್ಸವದಲ್ಲಿ ಚಿತ್ರದ ಎರಡನೇ ಹಾಡು ‘ಬ್ಲಡಿ ಲವ್‌’ ಬಿಡುಗಡೆಯಾಗಿತ್ತು. ಚಿತ್ರದಲ್ಲಿ ನಾಯಕಿಯರಾಗಿ ರಚಿತಾ ರಾಮ್ ಮತ್ತು ಮಲೈಕಾ ಟಿ. ವಸುಪಾಲ್‌ ಅಭಿನಯಿಸಿದ್ದಾರೆ. ಆಶ್ರಿತ್ ಸಿನಿಮಾಸ್ ಲಾಂಛನದಲ್ಲಿ ಈ ಸಿನಿಮಾ ನಿರ್ಮಾಣವಾಗಿದ್ದು, ಜೆ.ಎಸ್. ವಾಲಿ ಛಾಯಾಚಿತ್ರಗ್ರಹಣ, ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.