ADVERTISEMENT

ಪೃಥ್ವಿರಾಜ್–ಕರೀನಾ ಸಿನಿಮಾ ಶೂಟಿಂಗ್ ಮುಕ್ತಾಯ; 2026ಕ್ಕೆ ತೆರೆಗೆ ಬರಲಿದೆ ದಾಯ್ರಾ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2025, 23:30 IST
Last Updated 28 ಡಿಸೆಂಬರ್ 2025, 23:30 IST
ಪೃಥ್ವಿರಾಜ್‌ ಸುಕುಮಾರನ್‌ 
ಪೃಥ್ವಿರಾಜ್‌ ಸುಕುಮಾರನ್‌    

ಬಹುಭಾಷಾ ನಟ ಪೃಥ್ವಿರಾಜ್‌ ಸುಕುಮಾರನ್‌ ಹಾಗೂ ಬಾಲಿವುಡ್‌ ನಟಿ ಕರೀನಾ ಕಪೂರ್‌ ಖಾನ್‌ ನಟನೆಯ ‘ದಾಯ್ರಾ’ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. 

ಈ ಕುರಿತು ಪೃಥ್ವಿರಾಜ್‌ ಶುಕ್ರವಾರ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ನೀಡಿದ್ದಾರೆ. ‘ತಲ್ವಾರ್‌’, ‘ಸ್ಯಾಮ್‌ ಬಹದ್ದೂರ್‌’, ‘ರಾಝಿ’ ಖ್ಯಾತಿಯ ಮೇಘನಾ ಗುಲ್ಜಾರ್‌ ಈ ಸಿನಿಮಾಗೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಸೆಪ್ಟೆಂಬರ್‌ನಲ್ಲಿ ಈ ಸಿನಿಮಾದ ಶೂಟಿಂಗ್‌ ಆರಂಭವಾಗಿತ್ತು. 2026ರಲ್ಲಿ ಚಿತ್ರವು ತೆರೆಗೆ ಬರಲಿದೆ. 

ಕ್ರೈಂ ಡ್ರಾಮಾ ಥ್ರಿಲ್ಲರ್‌ ಜಾನರ್‌ನಲ್ಲಿ ಈ ಸಿನಿಮಾವಿದೆ. ಸಿಮಾ ಅಗರ್‌ವಾಲ್‌ ಹಾಗೂ ಯಶ್‌ ಕೇಸ್ವಾನಿ ಬರವಣಿಗೆಯಲ್ಲಿ ಮೇಘನಾಗೆ ಸಾಥ್‌ ನೀಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.