
ಡೆವಿಲ್ ಚಿತ್ರತಂಡ
ಚಿತ್ರ: ಇನ್‌ಸ್ಟಾಗ್ರಾಂ
ನಟ ದರ್ಶನ್ ಅಭಿನಯದ ಬಹುನಿರೀಕ್ಷಿತ ‘ದಿ ಡೆವಿಲ್’ ಸಿನಿಮಾ ರಾಜ್ಯಾದ್ಯಂತ ಡಿ.11ರಂದು (ಗುರುವಾರ) ಬಿಡುಗಡೆಯಾಗಿತ್ತು. ಡೆವಿಲ್ ಸಿನಿಮಾ ಕಣ್ತುಂಬಿಕೊಂಡ ಪ್ರೇಕ್ಷಕರು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ.
ನಟ ದರ್ಶನ್ ಹಾಗೂ ಚಿತ್ರತಂಡ
ಡೆವಿಲ್ ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ನಿರೀಕ್ಷೆಗೂ ಮೀರಿದ ಆರಂಭ ಪಡೆದುಕೊಂಡಿತ್ತು. ಬಹುತೇಕ ಚಿತ್ರಮಂದಿರಗಳು ಹೌಸ್ ಫುಲ್ ಆಗಿದ್ದವು. ಹೀಗಾಗಿ ‘ದಿ ಡೆವಿಲ್’ ಮೊದಲ ದಿನದ ಕಲೆಕ್ಷನ್ ₹13.8 ಕೋಟಿ ರೂಪಾಯಿ ಗಳಿಸಿತ್ತು.
ನಟ ದರ್ಶನ್
ಈಗ ಶ್ರೀ ಜೈಮಾತಾ ಕಂಬೈನ್ಸ್ ಸಾಮಾಜಿಕ ಮಾಧ್ಯಮದಲ್ಲಿ ಡೆವಿಲ್ ಸಿನಿಮಾ ಚಿತ್ರೀಕರಣದ ಫೋಟೊಗಳನ್ನು ಹಂಚಿಕೊಂಡಿದೆ. ಅದರಲ್ಲಿ ದರ್ಶನ್ ಅವರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಚಿತ್ರಗಳು ಇರುವುದನ್ನು ಕಾಣಬಹುದು.
ನಟಿ ರಚನಾ ರೈ, ನಟ ದರ್ಶನ್
ಇನ್ನು, ಡೆವಿಲ್ ಸಿನಿಮಾ ನಾಯಕಿ ರಚನಾ ರೈ ಅವರು ಕೂಡ ಸಾಮಾಜಿಕ ಮಾಧ್ಯಮದಲ್ಲಿ ದರ್ಶನ್ ಜೊತೆಗೆ ಇರುವ ವಿಶೇಷ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ನಟಿ ರಚನಾ ರೈ, ನಟ ದರ್ಶನ್
ರಚನಾ ರೈ ಹಾಗೂ ಶ್ರೀ ಜೈಮಾತಾ ಕಂಬೈನ್ಸ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಚಿತ್ರಗಳಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಟಿ ರಚನಾ ರೈ, ನಟ ದರ್ಶನ್
ಸಿನಿಮಾದಲ್ಲಿ ದರ್ಶನ್ ಅವರು ಧನುಷ್ ರಾಜಶೇಖರ್ ಹಾಗೂ ಕೃಷ್ಣ ಎಂಬ ಎರಡು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಎರಡೂ ಪಾತ್ರಗಳು ತದ್ವಿರುದ್ಧವಾಗಿವೆ. ಇದರಲ್ಲಿ ನಟ ದರ್ಶನ್ ಡೈಲಾಗ್, ಸ್ಟೈಲ್ ಎಲ್ಲವೂ ಅಭಿಮಾನಿಗಳ ಗಮನ ಸೆಳೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.