ADVERTISEMENT

ವಿವಾದದ ನಡುವೆಯೂ ಯಶಸ್ಸು: ₹ 300 ಕೋಟಿ ಬಾಚಿಕೊಂಡ ರಣವೀರ್ ಸಿಂಗ್ 'ಧುರಂಧರ್'

ಪಿಟಿಐ
Published 15 ಡಿಸೆಂಬರ್ 2025, 7:05 IST
Last Updated 15 ಡಿಸೆಂಬರ್ 2025, 7:05 IST
   

ರಣವೀರ್ ಸಿಂಗ್ ನಟನೆಯ ‘ಧುರಂಧರ್’ ಸಿನಿಮಾ ಬಿಡುಗೆಯಾಗಿ ಒಂದು ವಾರ ಕಳೆದಿದೆ. ಆದರೆ, ಚಿತ್ರಮಂದಿರಗಳಲ್ಲಿ ಚಿತ್ರದ ಅಬ್ಬರ ಕಡಿಮೆಯಾಗಿಲ್ಲ. ಇದೀಗ ಸಿನಿಮಾದ ಮೊದಲ ವಾರದ ಗಳಿಕೆಯ ಕುರಿತು ಚಿತ್ರತಂಡ ಅಧಿಕೃತ ಮಾಹಿತಿ ಹಂಚಿಕೊಂಡಿದೆ.

ಈ ಸಿನಿಮಾದಲ್ಲಿ, ಗಡಿ ವಿವಾದ ಕುರಿತ ಅಂಶಗಳನ್ನು ಒಳಗೊಂಡಿದೆ ಎಂದು ಕೊಲ್ಲಿ ದೇಶಗಳಾದ ಯುಎಇ, ಸೌದಿ ಅರೇಬಿಯಾ, ಕತಾರ್, ಬಹರೇನ್, ಕುವೈತ್ ದೇಶದಲ್ಲಿ ಚಿತ್ರ ಪ್ರದರ್ಶನ ತಡೆಹಿಡಿಯಲಾಗಿತ್ತು. ಇದರ ನಡುವೆ ಈ ಸಿನಿಮಾವು ಗಲ್ಲಾ ಪೆಟ್ಟಿಗೆಯಲ್ಲಿ ಯಶಸ್ಸು ಕಾಣುತ್ತಿದೆ.

ಡಿಸೆಂಬರ್ 5ರಂದು ‘ಧುರಂಧರ್’ ಚಿತ್ರವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. 9 ದಿನಗಳಲ್ಲಿ ₹306.40 ಕೋಟಿ ಗಳಿಕೆ ಮಾಡಿದೆ ಎಂದು ಸಿನಿಮಾ ನಿರ್ಮಾಣ ಸಂಸ್ಥೆ ಭಾನುವಾರ ಮಾಹಿತಿ ನೀಡಿದೆ.

ADVERTISEMENT

ಆದಿತ್ಯ ಧಾರ್ ನಿರ್ದೇಶನದ ಈ ಚಿತ್ರವನ್ನು ಇವರ ಸಹೋದರ ಲೋಕೇಶ್ ಧಾರ್ ಹಾಗೂ ಜ್ಯೋತಿ ದೇಶಪಾಂಡೆ ಅವರು ಬಿ62 ಸ್ಟುಡಿಯೋಸ್ ಮತ್ತು ಜಿಯೋ ಸ್ಟುಡಿಯೋಸ್‌ ಅಡಿಯಲ್ಲಿ ನಿರ್ಮಿಸಲಾಗಿದೆ. ‘ಧುರಂಧರ್‘ ಸಿನಿಮಾದಲ್ಲಿ ರಣ್‌ವೀರ್ ಸಿಂಗ್, ಸಂಜಯ್ ದತ್, ಅಕ್ಷಯ ಖನ್ನಾ, ಆರ್. ಮಾಧವನ್, ಅರ್ಜುನ್ ರಾಂಪಾಲ್, ಸಾರಾ ಅರ್ಜುನ್ ಸೇರಿದಂತೆ ಅನೇಕರು ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.