ADVERTISEMENT

Dhurandhar: ಆರ್.ಮಾಧವನ್‌ ಫಸ್ಟ್‌ ಲುಕ್‌ ಹಂಚಿಕೊಂಡ ನಟ ರಣವೀರ್ ಸಿಂಗ್

ಪಿಟಿಐ
Published 9 ನವೆಂಬರ್ 2025, 13:38 IST
Last Updated 9 ನವೆಂಬರ್ 2025, 13:38 IST
<div class="paragraphs"><p>ಆರ್.ಮಾಧವನ್‌</p></div>

ಆರ್.ಮಾಧವನ್‌

   

ಚಿತ್ರ ಕೃಪೆ: ಎಕ್ಸ್

ನವದೆಹಲಿ: ಬಾಲಿವುಡ್‌ ನಟ ರಣವೀರ್‌ ಸಿಂಗ್‌ ಮುಂಬರುವ ‘ಧುರಂಧರ್‌’ ಸಿನಿಮಾದಲ್ಲಿ ತಮ್ಮ ಸಹ ನಟ ಆರ್‌. ಮಾಧವನ್ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಪೋಸ್ಟರ್‌ ಹಂಚಿಕೊಂಡಿದ್ದಾರೆ. 

ADVERTISEMENT

ಬಾಲಿವುಡ್‌ನಲ್ಲಿ ನಿರೀಕ್ಷೆ ಹುಟ್ಟಿಸಿರುವ ಧುರಂಧರ್ ಸಿನಿಮಾ ಡಿ.5ರಂದು ತೆರೆಕಾಣುತ್ತಿದೆ. ‘ಉರಿ: ದಿ ಸರ್ಜಿಕಲ್‌ ಸ್ಟ್ರೈಕ್‌’ ಖ್ಯಾತಿಯ ಆದಿತ್ಯ ಧರ್‌ ಅವರು ‘ಧುರಂಧರ್’ ಚಿತ್ರವನ್ನು ಬರೆದು ನಿರ್ದೇಶಿಸಿದ್ದಾರೆ. 

ಬಹುದೊಡ್ಡ ತಾರಾಗಣವೇ ಈ ಚಿತ್ರದಲ್ಲಿ ಬಣ್ಣ ಹಚ್ಚಿದೆ. ಸಂಜಯ್‌ ದತ್‌, ಅಕ್ಷಯ್‌ ಖನ್ನಾ, ಅರ್ಜುನ್‌ ರಾಂಪಾಲ್‌, ಸಾರಾ ಅರ್ಜುನ್‌, ರಾಕೇಶ್‌ ಬೇಡಿ ಸೇರಿ ಹಲವರು ಕಾಣಿಸಿಕೊಂಡಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ರಣವೀರ್, ‘ಕರ್ಮದ ಸಾರಥಿ’ ಎಂದು ಬರೆದುಕೊಂಡಿದ್ದಾರೆ. ನ.12 ರಂದು ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ ಎಂದೂ ಮಾಹಿತಿ ನೀಡಿದ್ದಾರೆ.

ಪೋಸ್ಟರ್‌ನಲ್ಲಿ ಮಾಧವನ್‌ ಅವರು ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಅರ್ಧ ಬೋಳು ತಲೆ, ಪ್ಯಾಂಟ್‌–ಸೂಟ್‌ ಧರಿಸಿ ಖಡಕ್ ಆಫೀಸರ್‌ನಂತೆ ಕಾಣಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.