
ನವದೆಹಲಿ: ಆದಿತ್ಯ ದಾರ್ ನಿರ್ದೇಶನದ ‘ಧುರಂಧರ್ 2’ ಸಿನಿಮಾವು ವೀಕ್ಷಕರನ್ನು ಭಯಭೀತಗೊಳಿಸುತ್ತದೆ ಎಂದು ಪ್ರಸಿದ್ಧ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಹೇಳಿದ್ದಾರೆ.
‘ಧುರಂಧರ್ 2’ ಸಿನಿಮಾದ ಕುರಿತು ರಾಮ್ ಗೋಪಾಲ್ ವರ್ಮಾ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸೋಮವಾರ ಪೋಸ್ಟ್ ಮಾಡಿದ್ದಾರೆ.
‘ಬಾಲಿವುಡ್ ಮೇಲಿನ ದಕ್ಷಿಣ ಭಾರತೀಯ ಸಿನಿಮಾಗಳ ಅತಿಕ್ರಮಣವನ್ನು ‘ಧುರಂಧರ್’ ಚಿತ್ರವು ಹಿಮ್ಮೆಟ್ಟಿಸಿತ್ತು. ‘ಧುರಂಧರ್ 2’ ಚಿತ್ರವು ಬಿಡುಗಡೆಗೆ ಸಿದ್ದವಿದ್ದು, ಮೊದಲ ಭಾಗವು ವೀಕ್ಷಕರನ್ನು ಹೆದರಿಸಿದ್ದರೆ, ಎರಡನೇ ಭಾಗವು ಭಯಭೀತಗೊಳಿಸುತ್ತದೆ’ ಎಂದು ಪೋಸ್ಟ್ ಮಾಡಿದ್ದಾರೆ.
‘ಧುರಂಧರ್’ ಚಿತ್ರದ ಎರಡನೇ ಭಾಗವಾಗಿರುವ ಈ ಚಿತ್ರವು ಮಾರ್ಚ್ 19ರಂದು ಬಿಡುಗಡೆಯಾಗಲಿದೆ.
ಡಿ.5ರಂದು ಬಿಡುಗಡೆಯಾಗಿದ್ದ ಬಾಲಿವುಡ್‌ನ ‘ಧುರಂಧರ್’ಸಿನಿಮಾವು ಈಗಾಗಲೇ ಜಗತ್ತಿನಾದ್ಯಂತ ಬಾಕ್ಸ್‌ಆಫೀಸ್‌ನಲ್ಲಿ ಸಾವಿರ ಕೋಟಿ ಗಡಿ ದಾಟಿದೆ.
‘ಧುರಂಧರ್’ ಚಿತ್ರದಲ್ಲಿ ರಣವೀರ್ ಸಿಂಗ್, ಸಂಜಯ್ ದತ್, ಅಕ್ಷಯ್ ಖನ್ನಾ, ಅರ್ಜುನ್ ರಾಂಪಾಲ್, ಸಾರಾ ಅರ್ಜುನ್, ಆರ್. ಮಾಧವನ್ ಸೇರಿದಂತೆ ಖ್ಯಾತ ನಟರ ದಂಡೇ ಅಭಿನಯಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.