ADVERTISEMENT

ಸ್ಮಾರ್ಟ್ ಜನರಿಗೆ ಪ್ರೀತಿ, ಮೂಕರಿಗೆ ಮದುವೆ: ಆರ್‌ಜಿವಿ ಹೇಳಿದ್ದು ಯಾರಿಗೆ?

ಐಎಎನ್ಎಸ್
Published 18 ಜನವರಿ 2022, 10:48 IST
Last Updated 18 ಜನವರಿ 2022, 10:48 IST
ರಾಮ್ ಗೋಪಾಲ್ ವರ್ಮಾ
ರಾಮ್ ಗೋಪಾಲ್ ವರ್ಮಾ   

ಚೆನ್ನೈ: ‘ಮದುವೆಗಿಂತ ವೇಗವಾಗಿ ಬೇರಾವುದೂ ಪ್ರೀತಿಯನ್ನು ‘ಕೊಲೆ’ ಮಾಡುವುದಿಲ್ಲ. ಮದುವೆ ಎಂಬುದು ಜೈಲು ಅದನ್ನು ಸೇರುವ ಬದಲು ಪ್ರೀತಿ ಇರುವವರೆಗೂ ಪ್ರೀತಿಸಿ ನಂತರ ಮುಂದುವರಿಯುವುದೇ ಸಂತೋಷದ ರಹಸ್ಯ’ ಎಂದು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅಭಿಪ್ರಾಯಪಟ್ಟಿದ್ದಾರೆ.

ಸೆಲೆಬ್ರಿಟಿ ವಿಚ್ಛೇದನ ಪ್ರಕರಣಗಳು ಹೆಚ್ಚುತ್ತಿರುವ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ‘ಸೆಲೆಬ್ರಿಟಿಗಳು ಮದುವೆಯ ಅಪಾಯದ ಬಗ್ಗೆ ಯುವಜನರನ್ನು ಎಚ್ಚರಿಸುವ ಉತ್ತಮ ಟ್ರೆಂಡ್‌ ಸೆಟರ್‌ಗಳಾಗಿದ್ದಾರೆ. ಮದುವೆಗಿಂತ ವೇಗವಾಗಿ ಪ್ರೀತಿಯನ್ನು ಕೊಲೆ ಮಾಡುವುದು ಯಾವುದೂ ಇಲ್ಲ. ಮದುವೆ ಎಂಬ ಜೈಲು ಸೇರುವ ಬದಲು ಪ್ರೀತಿ ಇರುವವರೆಗೂ ಪ್ರೀತಿಸಿ’ ಎಂದಿದ್ದಾರೆ.

ಮದುವೆಯಾದ ಮೇಲೆ ಪ್ರೀತಿ ಹೆಚ್ಚು ದಿನ ಇರುವುದಿಲ್ಲ. ಅಂದರೆ 3ರಿಂದ 5 ದಿನಗಳವರೆಗೆ ಮಾತ್ರ ಪ್ರೀತಿ ಇರುತ್ತದೆ. ಸ್ಮಾರ್ಟ್ ಜನರು ಪ್ರೀತಿಸುತ್ತಾರೆ. ಮೂಕರು ಮದುವೆಯಾಗುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

ಮದುವೆ ಎಂಬುದು ಸಮಾಜದ ಮೇಲೆ ಹೇರಿದ ಅತ್ಯಂತ ಕೆಟ್ಟ ಸಂಪ್ರದಾಯವಾಗಿದೆ ಎಂದು ಆರ್‌ಜಿವಿ ಕಿಡಿಕಾರಿದ್ದಾರೆ.

ತಮಿಳು ನಟ ಧನುಷ್‌ ಹಾಗೂ ಚಿತ್ರ ನಿರ್ಮಾಪಕಿ, ಪತ್ನಿ ಐಶ್ವರ್ಯಾ ರಜನಿಕಾಂತ್‌ ಅವರು ವಿಚ್ಛೇದನ ಪಡೆಯುವುದಾಗಿ ಘೋಷಿಸಿದ ಬೆನ್ನಲ್ಲೇ ರಾಮ್‌ ಗೋಪಾಲ್‌ ವರ್ಮಾ ಟ್ವೀಟ್‌ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.