ಮೋಹನ್‌ಲಾಲ್
ನವದೆಹಲಿ: ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ನಟನೆಯ ದೃಶ್ಯಂ 3 ಚಿತ್ರ ಅಕ್ಟೋಬರ್‌ನಲ್ಲಿ ತೆರೆ ಕಾಣುತ್ತಿದೆ.
ಆಶೀರ್ವಾದ್ ಸಿನಿಮಾಸ್ ಬ್ಯಾನರ್‌ನಡಿ ಆ್ಯಂಟೊನಿ ಪೆರವಂಬೂರ್ ನಿರ್ಮಾಣದಲ್ಲಿ, ಜೀತು ಜೋಸೆಫ್ ನಿರ್ದೇಶನದಲ್ಲಿ ಚಿತ್ರ ತಯಾರಾಗುತ್ತಿದೆ.
ಇದು ದೃಶ್ಯಂ 2 ಚಿತ್ರದ ಸೀಕ್ವೆಲ್ ಅಗಿದೆ.
ದೃಶ್ಯಂ ಸರಣಿಯ ಮೊದಲ ಚಿತ್ರ 2013ರಲ್ಲಿ ತೆರೆ ಕಂಡಿತ್ತು, 2022ರಲ್ಲಿ ದೃಶ್ಯಂ 2 ಬಿಡುಗಡೆಯಾಗಿತ್ತು. ಮೋಹನ್‌ಲಾಲ್ ಜಾರ್ಜ್ ಕುಟ್ಟಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ದೃಶ್ಯಂ 3 ಚಿತ್ರದ ಬಗ್ಗೆ ಮೋಹನ್‌ಲಾಲ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ದೃಶ್ಯಂ ಚಿತ್ರ ಉತ್ತಮ ಯಶಸ್ಸು ಕಂಡ ಹಿನ್ನೆಲೆ ಹಿಂದಿ, ತಮಿಳು, ತೆಲುಗು, ಕನ್ನಡ. ಚೈನೀಸ್ (ಮಾಂಡರೀನ್) ಮತ್ತು ಸಿಂಹಿಳೀಯ (ಶ್ರೀಲಂಕಾ ಭಾಷೆ) ಭಾಷೆಗಳಲ್ಲಿಯೂ ರೀಮೇಕ್ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.