ADVERTISEMENT

'ಗಂಗೂಬಾಯಿ ಕಾಠಿಯಾವಾಡಿ’: 'ಮೇರಿ ಜಾನ್‌’ ವಿಡಿಯೊ ಸಾಂಗ್‌ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2022, 12:08 IST
Last Updated 21 ಫೆಬ್ರುವರಿ 2022, 12:08 IST
ಆಲಿಯಾ ಭಟ್‌, ಎಸ್‌ ಮಹೇಶ್ವರಿ
ಆಲಿಯಾ ಭಟ್‌, ಎಸ್‌ ಮಹೇಶ್ವರಿ   

ಮುಂಬೈ: ನಟಿ ಆಲಿಯಾ ಭಟ್‌ ಪ್ರಧಾನ ಪಾತ್ರದಲ್ಲಿ ನಟಿಸಿರುವ ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ 'ಗಂಗೂಬಾಯಿ ಕಾಠಿಯಾವಾಡಿ' ಚಿತ್ರದ 'ಮೇರಿ ಜಾನ್‌’ ವಿಡಿಯೊ ಸಾಂಗ್‌ ಬಿಡುಗಡೆಯಾಗಿದೆ.

ಈಗಾಗಲೇ ಗಂಗೂಬಾಯಿ ಟ್ರೈಲರ್‌ ಬಿಡುಗಡೆಯಾಗಿದ್ದು, ಚಿತ್ರ ರಸಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಚಿತ್ರವು ಫೆಬ್ರುವರಿ 25ರಂದು ತೆರೆಗೆ ಬರಲಿದೆ.

ಹಾಡು ಬಿಡುಗಡೆಯಾಗಿ 3 ಗಂಟೆಗಳಲ್ಲಿ 8 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ಎಸ್‌. ಮಹೇಶ್ವರಿ ಹಾಗೂ ಆಲಿಯಾ ಭಟ್‌ ವಿಡಿಯೊ ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ADVERTISEMENT

ಮುಂಬೈನ ಕಾಮಾಟಿಪುರದ ವೇಶ್ಯೆಯರು ಹಾಗೂ ಅವರ ಮಕ್ಕಳ ಹಕ್ಕುಗಳಿಗಾಗಿ ಹೋರಾಡುವ ಗಂಗೂಬಾಯಿಯ ಜೀವನವನ್ನು ಆಧರಿಸಿ ಚಿತ್ರವನ್ನು ತಯಾರಿಸಲಾಗಿದೆ.

ಈ ಚಿತ್ರದಲ್ಲಿ ಸೀಮಾ ಫಹ್ವಾ ಅವರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಅತಿಥಿ ಪಾತ್ರದಲ್ಲಿ ನಟ ಅಜಯ್‌ ದೇವಗನ್‌ ಮತ್ತು ಹುಮಾ ಖುರೇಷಿ ಕಾಣಿಸಿಕೊಂಡಿದ್ದಾರೆ.

ಈ ಸಿನಿಮಾದ ಆಲ್ಬಮ್‌ ಕಳೆದ ಶುಕ್ರವಾರ ಬಿಡುಗಡೆಯಾಗಿದೆ. ಅರ್ಜಿತ್‌ ಸಿಂಗ್‌, ಶ್ರೇಯಾ ಘೋಷಾಲ್‌ ಸೇರಿದಂತೆ ಬಾಲಿವುಡ್‌ನ ಹಲವು ಪ್ರಮುಖ ಗಾಯಕರು ಈ ಹಾಡುಗಳಿಗೆ ಧ್ವನಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.