ADVERTISEMENT

ಶಿವಣ್ಣ ಅಭಿಮಾನಿಗಳಿಗೆ ಸಿಹಿ ಸುದ್ದಿ: ‘ಭಜರಂಗಿ–2‘ ಬಿಡುಗಡೆ ದಿನಾಂಕ ಘೋಷಣೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಜುಲೈ 2021, 6:11 IST
Last Updated 21 ಜುಲೈ 2021, 6:11 IST
ಭಜರಂಗಿ–2 ಪೋಸ್ಟರ್‌
ಭಜರಂಗಿ–2 ಪೋಸ್ಟರ್‌   

ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ ಅಭಿನಯದ‘ಭಜರಂಗಿ 2’ ಸಿನಿಮಾದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಣೆ ಮಾಡಿದೆ.

ಕಳೆದ ವಾರವಷ್ಟೆ ಶಿವಣ್ಣ ಜನ್ಮದಿನ ಆಚರಿಸಿಕೊಂಡಿದ್ದರು. ಈ ವೇಳೆ ಚಿತ್ರತಂಡ4K ಟೀಸರ್ ಬಿಡುಗಡೆ ಮಾಡುವ ಮೂಲಕ ಶಿವಣ್ಣ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ಕೊಟ್ಟಿದ್ದರು. ಇದೀಗ ಸಿನಿಮಾದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದೆ.

‘ಭಜರಂಗಿ 2’ ಸಿನಿಮಾವನ್ನು ಜಯಣ್ಣ ಫಿಲಂಸ್ ನಿರ್ಮಾಣ ಮಾಡಿದೆ. ಎ.ಹರ್ಷ ನಿರ್ದೇಶನ ಮಾಡಿರುವ ಈ ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಶಿವಣ್ಣನಿಗೆ ನಾಯಕಿಯಾಗಿ ಭಾವನ ಮೆನನ್ ನಟಿಸಿದ್ದಾರೆ.

‘ಭಜರಂಗಿ 2’ ಸಿನಿಮಾ ಸೆಪ್ಟೆಂಬರ್‌ 10ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.ಅಂದಹಾಗೆ ಸೆಪ್ಟೆಂಬರ್‌ 10 ಗಣೇಶ ಹಬ್ಬ. ಆ ದಿನವೇ ಭಜರಂಗಿ-2 ಸಿನಿಮಾ ಬಿಡುಗಡೆಯಾಗುತ್ತಿರುವುದು ಶಿವಣ್ಣ ಅಭಿಮಾನಿಗಳಿಗೆ ಹಬ್ಬದ ಸಂಭ್ರಮ ಮತ್ತಷ್ಟು ಹೆಚ್ಚಲಿದೆ.

ಕೋವಿಡ್‌ ಕಾರಣದಿಂದ ಸಿನಿಮಾ ಬಿಡುಗಡೆಯಾಗುವುದು ವಿಳಂಬವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.