ADVERTISEMENT

ಜಲೇಬಿ ಬೇಬಿ ಎಂದು ತನ್ವಿ ಶಾ ಜತೆ ಡ್ಯಾನ್ಸ್ ಮಾಡಿದ ಹಂಸಿಕಾ ಮೋಟ್ವಾನಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಆಗಸ್ಟ್ 2021, 8:03 IST
Last Updated 11 ಆಗಸ್ಟ್ 2021, 8:03 IST
ನಟಿ ಹಂಸಿಕಾ ಮೋಟ್ವಾನಿ- ಇನ್‌ಸ್ಟಾಗ್ರಾಂ ಪೋಸ್ಟ್
ನಟಿ ಹಂಸಿಕಾ ಮೋಟ್ವಾನಿ- ಇನ್‌ಸ್ಟಾಗ್ರಾಂ ಪೋಸ್ಟ್    

ಬೆಂಗಳೂರು: ನಟಿ ಹಂಸಿಕಾ ಮೋಟ್ವಾನಿ ಸಾಮಾಜಿಕ ತಾಣಗಳಲ್ಲಿ ಸಕ್ರಿಯರಾಗಿರುವ ನಟಿ. ಸದ್ಯ ಅವರು ಮಾಲ್ಡೀವ್ಸ್‌ನಲ್ಲಿ ಪ್ರವಾಸದಲ್ಲಿದ್ದು, ಅಲ್ಲಿಂದ ಬೀಚ್‌ನಲ್ಲಿರುವ ವಿವಿಧ ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ.

ಅಲ್ಲದೆ, ಸಹೋದರಿ ತನ್ವಿ ಶಾ ಜತೆಗೆ ಇನ್‌ಸ್ಟಾಗ್ರಾಂ ರೀಲ್ಸ್ ಒಂದನ್ನು ಮಾಡಿರುವ ನಟಿ, ಅದರಲ್ಲಿ ಮಾಲ್ಡೀವ್ಸ್ ಬೀಚ್‌ನಲ್ಲಿ ಕಳೆದಿರುವ ಸುಂದರ ಕ್ಷಣಗಳನ್ನು ಹಂಸಿಕಾ ನೆನಪಿಸಿಕೊಂಡಿದ್ದಾರೆ.

ಮಾಲ್ಡೀವ್ಸ್‌ನ ಸನ್ ಸಿಯಮ್ ಇರುವೆಲಿ ರೆಸಾರ್ಟ್‌ನಲ್ಲಿ ಹಂಸಿಕಾ ರೀಲ್ಸ್ ಚಿತ್ರೀಕರಣ ಮಾಡಿದ್ದಾರೆ.

ADVERTISEMENT

ತನ್ವಿ ಶಾ ಜತೆಗೆ ಜಲೇಬಿ ಬೇಬಿ ಎಂದು ಕುಣಿದಿರುವ ವಿಡಿಯೊ ಈಗ ವೈರಲ್ ಆಗಿದೆ.

ಹಂಸಿಕಾ ಇನ್‌ಸ್ಟಾಗ್ರಾಂ ರೀಲ್ಸ್ ಅನ್ನು ಮೂರು ಲಕ್ಷಕ್ಕೂ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಲಾಕ್‌ಡೌನ್ ತೆರವಿನ ಬಳಿಕ ಸೆಲೆಬ್ರಿಟಿಗಳು, ಬಾಲಿವುಡ್‌ ಮಂದಿ ಮಾಲ್ಡೀವ್ಸ್‌ಗೆ ಮತ್ತೆ ಪ್ರವಾಸ ಹೋಗಿ ಬರುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.