ಮಗಳೊಂದಿಗೆ ಹರ್ಷಿಕಾ ಪೂಣಚ್ಚ ಮತ್ತು ಭುವನ್
ಇನ್‌ಸ್ಟಾಗ್ರಾಂ ಚಿತ್ರ
ಇತ್ತೀಚಿಗೆ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಅವರು ತಮ್ಮ ಮಗಳು ತ್ರಿದೇವಿ ಪೊನ್ನಕ್ಕ ಜತಗೆ ವಿದೇಶ ಪ್ರವಾಸ ಕೈಗೊಂಡಿದ್ದರು
8 ತಿಂಗಳ ತ್ರಿದೇವಿ ಪೊನ್ನಕ್ಕ 2 ವಾರಗಳಲ್ಲಿ 8 ವಿಮಾನಗಳಲ್ಲಿ ಪ್ರಯಾಣಿಸಿ 3 ದೇಶ ಸುತ್ತಿದ್ದಾಳೆ ಎಂದು ಹರ್ಷಿಕಾ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ
ಪತಿ ಭುವನ್ ಮತ್ತು ಮಗಳೊಂದಿಗೆ ಈ ಪ್ರವಾಸದಲ್ಲಿ ಮರೆಯಲಾಗದ ಅನುಭವ ಪಡೆದಿದ್ದೇನೆ ಎಂದು ಹರ್ಷಿಕಾ ಹೇಳಿದ್ದಾರೆ
ವಿಯೆಟ್ನಾಂ, ಶ್ರೀಲಂಕಾ, ಥೈಲ್ಯಾಂಡ್ ದೇಶಗಳಿಗೆ ಭೇಟಿ ನೀಡಿರುವುದಾಗಿ ಹರ್ಷಿಕಾ ಹೇಳಿದ್ದಾರೆ
ಕಳೆದ ಮೇನಲ್ಲಿ ಅದ್ಧೂರಿಯಾಗಿ ಮಗಳ ನಾಮಕರಣ ಶಾಸ್ತ್ರ ಮಾಡಿದ್ದ ಹರ್ಷಿಕಾ ಹಾಗೂ ಭುವನ್ ತ್ರಿದೇವಿ ಪೊನ್ನಕ್ಕ ಎಂದು ಹೆಸರಿಟ್ಟಿದ್ದರು
ಮಗಳೊಂದಿಗೆ ನಟ ಭುವನ್
ಪೊನ್ನಕ್ಕ ಎನ್ನುವುದು ಅವಳ ಪೋಷಕರಿಬ್ಬರ ಅಂದರೆ ನಮ್ಮ ಹೆಸರುಗಳ ಸಂಯೋಜನೆಯಾಗಿದೆ ಎಂದು ತಾರಾ ಜೋಡಿ ಹೇಳಿಕೊಂಡಿದ್ದರು
ಮಗಳ ಫೋಟೊವನ್ನು ಹರ್ಷಿಕಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ
ಮಗಳೊಂದಿಗೆ ಹರ್ಷಿಕಾ ಪೂಣಚ್ಚ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.