ADVERTISEMENT

‘ಹಯಗ್ರೀವ’ ಟೀಸರ್‌ನಲ್ಲಿ ಪೊಲೀಸ್ ಪಾತ್ರದಲ್ಲಿ ಅಬ್ಬರಿಸಿದ ನಟ ಧನ್ವೀರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಜನವರಿ 2026, 9:19 IST
Last Updated 23 ಜನವರಿ 2026, 9:19 IST
<div class="paragraphs"><p>ನಟ&nbsp;ಧನ್ವೀರ್‌</p></div>

ನಟ ಧನ್ವೀರ್‌

   

ಚಿತ್ರ: ಯೂಟ್ಯೂಬ್

ನಟ ಧನ್ವೀರ್‌ ನಟನೆಯಲ್ಲಿ ಮೂಡಿಬರುತ್ತಿರುವ ‘ಹಯಗ್ರೀವ’ ಸಿನಿಮಾ ಟೀಸರ್ ಬಿಡುಗಡೆಯಾಗಿದೆ. ಆನಂದ್ ಆಡಿಯೊ ಯೂಟ್ಯೂಬ್ ಚಾನೆಲ್‌ನಲ್ಲಿ ಟೀಸರ್ ಅನ್ನು ಬಿಡುಗಡೆ ಮಾಡಲಾಗಿದೆ. ಜೊತೆಗೆ ಹಯಗ್ರೀವ ಸಿನಿಮಾ ಬಿಡುಗಡೆ ದಿನಾಂಕವನ್ನು ಕೂಡ ಘೋಷಣೆ ಮಾಡಲಾಗಿದೆ.

ADVERTISEMENT

ಫೆ.27ರಂದು ಧನ್ವೀರ್‌ ಅಭಿನಯದ ‘ಹಯಗ್ರೀವ’ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದೀಗ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಅದರಲ್ಲಿ ನಟ ಧನ್ವೀರ್‌ ಪೊಲೀಸ್ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಟೀಸರ್‌ನಲ್ಲಿ ‘ಒಬ್ಬ ಪೊಲೀಸ್ ಕ್ರಿಮಿನಲ್‌ನ ಹಿಡಿಯೋದಕ್ಕೆ ಎಷ್ಟು ದೂರ ಹೋಗ್ತಾನೆ? ಬೇರೆ ಊರಿಗೆ, ಬೇರೆ ರಾಜ್ಯಕ್ಕೆ, ಬೇರೆ ದೇಶಕ್ಕೆ.. ಆದರೆ ಇಲ್ಲೊಬ್ಬ ಬೇರೆ ಯುಗಕ್ಕೆ ಹೊರಟಿದ್ದಾನೆ. ಅವನು ದೇವರ ಅವತಾರನೋ.. ರಾಕ್ಷಸನ ಅವತಾರನೋ ಗೊತ್ತಿಲ್ಲ. ಅವನಿಂದ ಒಳ್ಳೆಯದಾಗುತ್ತೋ, ಕೆಟ್ಟದಾಗುತ್ತೋ ಅದು ಗೊತ್ತಿಲ್ಲ. ಆದರೆ ಅವನನ್ನು ನೋಡೋದಕ್ಕೆ ಇಡೀ ಪ್ರಪಂಚ ಕಾಯುತ್ತಿದೆ’ ಎಂದು ಧ್ವನಿ ನೀಡಲಾಗಿದೆ.

ಇನ್ನು, ಸಮೃದ್ಧಿ ಮಂಜುನಾಥ್ ತಮ್ಮ ಕೆ.ವೆ.ಸಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ರಘುಕುಮಾರ್ ಒ.ಆರ್ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಧನ್ವೀರ್‌ಗೆ ಜೋಡಿಯಾಗಿ ‘ಸಲಗ’ ಖ್ಯಾತಿಯ ಸಂಜನಾ ಆನಂದ್ ನಟಿಸಿದ್ದಾರೆ. ‘ಚಿತ್ರದಲ್ಲಿ ಮುಖ್ಯವಾಗಿ ಪೌರಾಣಿಕ ಅಂಶಗಳ ಜೊತೆಗೆ ಕ್ರೈಮ್‍ ಇದೆ. ಪ್ರೀತಿ, ಭಾವನಾತ್ಮಕ ಅಂಶಗಳ ಜೊತೆಗೆ ಕಮರ್ಷಿಯಲ್ ಚಿತ್ರಕ್ಕೆ ಬೇಕಾದ ಎಲ್ಲಾ ಅಂಶಗಳು ಚಿತ್ರದಲ್ಲಿವೆ. ರಂಗಾಯಣ ರಘು, ತಾರಾ, ಸಾಧು ಕೋಕಿಲ, ರವಿಶಂಕರ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.