ADVERTISEMENT

2025: ಬಾಕ್ಸ್ ಆಫೀಸ್‌ನಲ್ಲಿ ಅತ್ಯಧಿಕ ಗಳಿಕೆ ಕಂಡ ಭಾರತದ ಪ್ರಮುಖ–10 ಸಿನಿಮಾಗಳಿವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಡಿಸೆಂಬರ್ 2025, 15:29 IST
Last Updated 20 ಡಿಸೆಂಬರ್ 2025, 15:29 IST
   

ಬೆಂಗಳೂರು: ಈ ವರ್ಷ(2025) ಭಾರತದಲ್ಲಿ ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳ ಸೇರಿದಂತೆ ಹಲವು ಭಾಷೆಗಳಲ್ಲಿ 1500ಕ್ಕೂ ಅಧಿಕ ಸಿನಿಮಾಗಳು ಬಿಡುಗಡೆಗೊಂಡಿವೆ.

2025ರಲ್ಲಿ ಭಾರತೀಯ ಸಿನಿಮಾಗಳು ಜಾಗತಿಕವಾಗಿ ₹12 ಸಾವಿರ ಕೋಟಿಗೂ ಅಧಿಕ ಬಾಕ್ಸ್‌ ಆಫೀಸ್‌ ಕಲೆಕ್ಷನ್ ಮಾಡಿವೆ. ‌

ಈ ವರ್ಷ ಬಿಡುಗಡೆಯಾದ ಭಾರತೀಯ ಸಿನಿಮಾಗಳಲ್ಲಿ ಅತ್ಯಧಿಕ ಗಳಿಕೆ ಕಂಡ ಪ್ರಮುಖ–10 ಸಿನಿಮಾಗಳಿವು

ಕಾಂತಾರ ಚಾಪ್ಟರ್ – 1: ಕನ್ನಡದ ಬಹು ನಿರೀಕ್ಷಿತ ಸಿನಿಮಾವಾಗಿದ್ದ ‘ಕಾಂತಾರ ಚಾಪ್ಟರ್‌ –1’ ಚಿತ್ರವು ಈ ವರ್ಷ ಅತ್ಯಧಿಕ ಗಳಿಕೆ ಕಂಡ ಭಾರತದ ಸಿನಿಮಾವಾಗಿದೆ. ರಿಷಭ್ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಈ ಸಿನಿಮಾವು ಜಗತ್ತಿನಾದ್ಯಂತ ₹850 ಕೋಟಿಗೂ ಅಧಿಕ ಬಾಕ್ಸ್‌ ಆಫೀಸ್ ಕಲೆಕ್ಷನ್ ಮಾಡಿದೆ.

ADVERTISEMENT

ಛಾವಾ: ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ ಅಭಿನಯದ ಮರಾಠ ನಾಯಕ ಸಂಭಾಜಿ ಜೀವನಾಧಾರಿತ ಐತಿಹಾಸಿಕ ಬಾಲಿವುಡ್ ಸಿನಿಮಾ ‘ಛಾವಾ’, ಬಾಕ್ಸ್‌ ಆಫೀಸ್‌ನಲ್ಲಿ ₹797.34 ಕೋಟಿ ಬಾಚಿಕೊಂಡಿದೆ.

ಧುರಂಧರ್: ರಣವೀರ್ ಸಿಂಗ್‌ ನಟನೆಯ ಬಾಲಿವುಡ್ ಸಿನಿಮಾ ‘ಧುರಂಧರ್’, ಡಿ.5ರಂದು ಬಿಡುಗಡೆಯಾಗಿದೆ. ಡಿ.20ರ ವೇಳೆಗೆ ಬಾಕ್ಸ್‌ ಆಫೀಸ್‌ನಲ್ಲಿ ₹751.98 ಕೋಟಿ ಗಳಿಸಿದೆ.

ಸೈಯಾರ: ಹೊಸ ಕಾಲದ ಪ್ರೇಮಕತೆಯನ್ನು ಒಳಗೊಂಡಿರುವ ಬಾಲಿವುಡ್‌ನ ‘ಸೈಯಾರ’ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ₹579.23 ಕೋಟಿ ಬಾಚಿಕೊಂಡಿದೆ.

ಕೂಲಿ: ಸೂಪರ್‌ಸ್ಟಾರ್‌ ರಜನಿಕಾಂತ್ ಅಭಿನಯದ ತಮಿಳು ಸಿನಿಮಾ ‘ಕೂಲಿ’, ಬಾಕ್ಸ್‌ ಆಫೀಸ್‌ನಲ್ಲಿ ₹550 ಕೋಟಿಗೂ ಅಧಿಕ ಗಳಿಕೆ ಕಂಡಿದೆ.

ವಾರ್ 2: ಹೃತಿಕ್ ರೋಷನ್, ಜೂ. ಎನ್‌ಟಿಆರ್‌ ನಟಿಸಿದ್ದ ಬಾಲಿವುಡ್‌ ಆ್ಯಕ್ಷನ್ ಸಿನಿಮಾ ‘ವಾರ್‌ –2’, ಬಾಕ್ಸ್‌ ಆಫೀಸ್‌ನಲ್ಲಿ ₹303.22 ಕೋಟಿ ಬಾಚಿಕೊಂಡಿದೆ.

ಮಹಾವತಾರ ನರಸಿಂಹ: ಆ್ಯನಿಮೇಟೇಡ್‌ ಪೌರಾಣಿಕ ಸಿನಿಮಾ ‘ಮಹಾವತಾರ ನರಸಿಂಹ’, ಬಾಕ್ಸ್‌ ಆಫೀಸ್‌ನಲ್ಲಿ ₹325 ಕೋಟಿಗೂ ಅಧಿಕ ಗಳಿಕೆ ಕಂಡಿದೆ.

ಲೋಕ ಚಾಪ್ಟರ್ –1; ಚಂದ್ರ: ಮಲಯಾಳದ ಫಿಕ್ಷನ್‌ ಸಿನಿಮಾ ‘ಲೋಕ ಚಾಪ್ಟರ್ –1; ಚಂದ್ರ’, ಬಾಕ್ಸ್‌ ಆಫೀಸ್‌ನಲ್ಲಿ ₹303 ಕೋಟಿಗೂ ಅಧಿಕ ಮೊತ್ತ ಬಾಚಿಕೊಂಡಿದೆ.

ಓಜಿ: ಪವನ್ ಕಲ್ಯಾಣ್ ನಟನೆ ಟಾಲಿವುಡ್‌ ಸಿನಿಮಾ ‘ದೇ ಕಾಲ್‌ ಹಿಮ್‌ ಓಜಿ’, ಗಲ್ಲಾಪೆಟ್ಟಿಗೆಯಲ್ಲಿ ₹293.65 ಕೋಟಿಗೂ ಅಧಿಕ ಗಳಿಕೆ ಕಂಡಿದೆ.

ಎಲ್‌–2 ಎಂಪೂರಾನ್: ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದ, ಮೋಹನ್‌ ಲಾಲ್ ಅಭಿನಯದ ‘ಎಲ್‌–2 ಎಂಪೂರಾನ್’ ಚಲನಚಿತ್ರವು ಬಾಕ್ಸ್‌ ಆಫೀಸ್‌ನಲ್ಲಿ ₹268 ಕೋಟಿಗೂ ಅಧಿಕ ಮೊತ್ತ ಬಾಚಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.