ರಾಜ್‌ಕಪೂರ್ 100ನೇ ಜನ್ಮದಿನಾಚರಣೆ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿಗೆ ಆಹ್ವಾನ : ಫೋಟೊ ಹಂಚಿಕೊಂಡ ನಟಿ ಕರೀನಾ
ಚಿತ್ರಕೃಪೆ: ಕರೀನಾ ಕಪೂರ್ ಇನ್‌ಸ್ಟಾಗ್ರಾಂ
ನವದೆಹಲಿ: ದಿವಂಗತ ನಟ ರಾಜ್ ಕಪೂರ್ ಅವರ 100ನೇ ಜನ್ಮ ದಿನದ ಆಚರಣೆ ಕಾರ್ಯಕ್ರಮಕ್ಕೆ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲು ಬಾಲಿವುಡ್ ನಟಿ ಕರೀನಾ ಕಪೂರ್, ಕುಟುಂಬ ಸಮೇತರಾಗಿ ಪ್ರಧಾನಿ ನಿವಾಸಕ್ಕೆ ಭೇಟಿ ನೀಡಿದ್ದು, ಪ್ರಧಾನಿ ನಿವಾಸದಲ್ಲಿ ಕಳೆದ ಕ್ಷಣಗಳ ಕುರಿತು ಕರೀನಾ ಪೋಸ್ಟ್ ಹಂಚಿಕೊಂಡಿದ್ದಾರೆ.
‘ರಾಜ್ ಕಪೂರ್ ಅವರ ಜೀವನ ಪಯಣವನ್ನು ಸಂಭ್ರಮಿಸಲು ಮೋದಿ ಅವರನ್ನು ಆಹ್ವಾನಿಸಿರುವುದಕ್ಕೆ ಸಂತಸವಾಗುತ್ತಿದೆ’ ಎಂದು ಬರೆದುಕೊಂಡಿರುವ ಕರೀನಾ ಕುಟುಂಬ ಸಮೇತರಾಗಿ ಮೋದಿಯವರೊಂದಿಗೆ ಕ್ಲಿಕ್ಕಿಸಿಕೊಂಡ ಫೋಟೊವನ್ನು ಹಂಚಿಕೊಂಡಿದ್ದಾರೆ.
‘ನಮ್ಮ ತಾತ, ರಾಜ್ ಕಪೂರ್ ಅವರು ಭಾರತೀಯ ಸಿನಿಮಾ ಕ್ಷೇತ್ರಕ್ಕೆ ನೀಡಿದ ಕೊಡುಗೆ ನಮ್ಮಂತಹ ಹಲವರಿಗೆ ಮತ್ತು ಮುಂಬರುವ ಯುವ ಕಲಾವಿದರಿಗೆ ಸ್ಪೂರ್ತಿಯಾಗಿದೆ’ ಎಂದು ಕರೀನಾ ಹೇಳಿದ್ದಾರೆ.
ಡಿ.14ರಂದು ರಾಜ್ ಕಪೂರ್ ಅವರ 100ನೇ ಜನ್ಮದಿನವನ್ನು ಕಪೂರ್ ಕುಟುಂಬ ಅದ್ಧೂರಿಯಾಗಿ ಆಚರಿಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.