ADVERTISEMENT

ಕಾಶ್ಮೀರ್‌ ಫೈಲ್ಸ್‌ ಸಿನಿಮಾ ನೋಡಿ ರಾಮ್‌ ಗೋಪಾಲ್‌ ವರ್ಮಾ ಹೇಳಿದ್ದು ಏನು?

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2022, 15:58 IST
Last Updated 21 ಮಾರ್ಚ್ 2022, 15:58 IST
ರಾಮ್‌ ಗೋಪಾಲ್‌ ವರ್ಮಾ
ರಾಮ್‌ ಗೋಪಾಲ್‌ ವರ್ಮಾ   

ಟಾಲಿವುಡ್‌ನಲ್ಲಿ ವಿವಾದಾತ್ಮಕ ನಿರ್ದೇಶಕ ಎಂದೇ ಖ್ಯಾತರಾಗಿರುವ ರಾಮ್‌ ಗೋಪಾಲ್‌ ವರ್ಮಾ ಅವರು ‘ದಿ ಕಾಶ್ಮೀರ್‌ ಫೈಲ್ಸ್‌‘ ಸಿನಿಮಾ ಬಗ್ಗೆ ವಿಮರ್ಶೆ ಮಾಡಿದ್ದು, ನಾನು ಈ ಸಿನಿಮಾವನ್ನು ಹೇಟ್‌ ಮಾಡುತ್ತೇನೆ ಎಂದು ಹೇಳಿದ್ದಾರೆ.

ವಿವೇಕ್‌ ಅಗ್ನಿಹೋತ್ರಿ ಅವರು,ಸಿನಿಮಾ ಹೇಗೆ ಮಾಡಬೇಕು ಎಂಬ ನಮ್ಮ ನಂಬಿಕೆಗಳ ಚಿತ್ರಣವನ್ನು ಬದಲಾಯಿಸಿದ್ದಾರೆ. ಸಿನಿಮಾ ಎಂಬ ಪರಿಕಲ್ಪನೆಯನ್ನು ಸೃಷ್ಟಿಸಲು ವಿವೇಕ್ ಅವರಿಂದ ಸಾಧ್ಯವಾಗಿಲ್ಲ ಎಂದು ರಾಮ್‌ ಗೋಪಾಲ್‌ ವರ್ಮಾ ಹೇಳಿದ್ದಾರೆ.

ಖಾಸಗಿ ಚಾನೆಲ್‌ ಹಾಗೂ ಯುಟ್ಯೂಬ್‌ ಚಾನೆಲ್‌ವೊಂದರಲ್ಲಿ ‘ದಿ ಕಾಶ್ಮೀರ್‌ ಫೈಲ್ಸ್‌‘ಸಿನಿಮಾ ಬಗ್ಗೆ ವಿಮರ್ಶೆ ಮಾಡಿದ್ದಾರೆ.

ADVERTISEMENT

ನಾನು ಸಿನಿಮಾದ ವಿವಾದಾತ್ಮಕ ವಿಷಯದ ಬಗ್ಗೆ ಮಾತನಾಡುವುದಿಲ್ಲ, ನಾವು ಇಷ್ಟು ದಿನ, ದೊಡ್ಡ ಬಜೆಟ್ ಸಿನಿಮಾಗಳು, ಜನಪ್ರಿಯ ನಾಯಕರ ಸಿನಿಮಾಗಳು ಮಾತ್ರವೇ ಜನರನ್ನು ಚಿತ್ರಮಂದಿರಕ್ಕೆ ಕರೆತರುತ್ತವೆಎಂದು ನಂಬಿದ್ದೆವು. ಆದರೆ ಈ ಚಿತ್ರ ಆ ಎಲ್ಲನಂಬಿಕೆ ಮತ್ತು ನಿಯಮಗಳನ್ನು ಮುರಿದು ಹಾಕಿದೆ ಎಂದಿದ್ದಾರೆ.

ವಿಷಯದಿಂದಾಗಿಯೇ, ಜನರು ಸೇರಿದಂತೆ ರಾಜಕಾರಣಿಗಳು ಸಿನಿಮಾ ನೋಡುತ್ತಿದ್ದಾರೆ. ಆದರೆ ವಿವೇಕ್‌ ಅವರು ಜನರನ್ನು ಇಂಪ್ರೆಸ್‌ ಮಾಡುವ ಪ್ರಯತ್ನವನ್ನೇಮಾಡಿಲ್ಲ ಎಂದು ವರ್ಮಾ ಹೇಳಿದ್ದಾರೆ.

ನಿರೂಪಣೆಯಲ್ಲೂ ಚುರುಕುತನ ಇಲ್ಲ, ತಾಂತ್ರಿಕತೆಯಲ್ಲೂ ಮೋಡಿ ಮಾಡಿಲ್ಲ ಎಂದು ವರ್ಮಾ ಹೇಳಿದ್ದಾರೆ. ಚಿತ್ರದ ಪಾತ್ರವರ್ಗದ ಬಗ್ಗೆ ಮಾತನಾಡಿರುವ ಅವರು ಅನುಪಮ್‌ ಖೇರ್‌, ಮಿಥುನ್‌ ಚಕ್ರವರ್ತಿ ಅಭಿನಯ ಚೆನ್ನಾಗಿದೆ ಎಂದು ಹೇಳಿದ್ದಾರೆ.

‘ದಿ ಕಾಶ್ಮೀರ್‌ ಫೈಲ್ಸ್‌‘ ಸಿನಿಮಾ ಎಂಬುದೇ ನನಗೆ ಅನುಮಾನ. ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ವರ್ಮಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.