
ಸೈಯ್ಯಾರ ನಟ ಅಹಾನ್ ಪಾಂಡೆ ಹಾಗೂ ನಟಿ ಅನೀತ್ ಪಡ್ಡಾ
ಬೆಂಗಳೂರು: ಪ್ರತೀ ವರ್ಷದಂತೆ ಈ ಬಾರಿಯೂ ಕೂಡ 2025ನೇ ಸಾಲಿನ ‘ಭಾರತದ ಅತ್ಯಂತ ಜನಪ್ರಿಯ ತಾರೆಯರ’ ಪಟ್ಟಿಯನ್ನು ಐಎಂಡಿಬಿ ರಿಲೀಸ್ ಮಾಡಿದೆ. ಈ ಪಟ್ಟಿಯಲ್ಲಿ ಮೂವರು ಕನ್ನಡಿಗರು ಸ್ಥಾನ ಪಡೆದುಕೊಂಡಿದ್ದಾರೆ.
ಈ ಬಾರಿ ಐಎಂಡಿಬಿ ಬಿಡುಗಡೆ ಮಾಡಿರುವ ಅತ್ಯಂತ ಜನಪ್ರಿಯ ತಾರೆಯರ ಪಟ್ಟಿಯಲ್ಲಿ ಶಾರುಖ್ ಖಾನ್, ಸಲ್ಮಾನ್ ಖಾನ್, ದೀಪಿಕಾ ಪಡುಕೋಣೆ ಸೇರಿದಂತೆ ಬಾಲಿವುಡ್ ತಾರಾ ನಟ–ನಟಿಯರು ಸ್ಥಾನ ಪಡೆದಿಲ್ಲ. ಬಹಗುತೇಕ ಹೊಸ ಮುಖಗಳು ಕಾಣಿಸಿಕೊಂಡಿದ್ದು, ಅದರಲ್ಲಿ ಮೂವರು ಕನ್ನಡಿಗರು ಸ್ಥಾನ ಪಡೆದಿದ್ದಾರೆ.
ಇನ್ನೂ ವಿಶೇಷವೆಂದರೆ ತಮಿಳು ಹಾಗೂ ತೆಲುಗಿನ ಯಾವೊಬ್ಬ ನಟ ನಟಿಯರೂ ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ.
ಸಯ್ಯಾರ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದ ಅಹಾನ್ ಪಾಂಡೆ ಹಾಗೂ ಅನೀತ್ ಪಡ್ಡಾ, ಈ ಇಬ್ಬರು ಜನಪ್ರಿಯ ತಾರೆಯರ ಪಟ್ಟಿಯಲ್ಲಿ ಮೊದಲೆರಡು ಸ್ಥಾನ ಪಡೆದುಕೊಂಡಿದ್ದಾರೆ. ಮೂರನೇ ಸ್ಥಾನದಲ್ಲಿ ಆಮಿರ್ ಖಾನ್, ನಾಲ್ಕನೇ ಸ್ಥಾನದಲ್ಲಿ ಇಶಾನ್ ಖಟ್ಟರ್ ಹಾಗೂ ಐದನೇ ಸ್ಥಾನದಲ್ಲಿ ಲಕ್ಷ್ಯ ಇದ್ದಾರೆ.
ಆರನೇ ಸ್ಥಾನದಲ್ಲಿ ಕೊಡಗಿನ ರಶ್ಮಿಕಾ ಮಂದಣ್ಣ ಸ್ಥಾನ ಪಡೆದಿದ್ದಾರೆ. 7ರಲ್ಲಿ ಲೋಕಃ ಸಿನಿಮಾದ ನಟಿ ಕಲ್ಯಾಣಿ ಪ್ರಿಯದರ್ಶನ್, 8ರಲ್ಲಿ ತೃಪ್ತಿ ದಿಮ್ರಿ ಇದ್ದರೆ, 9 ಹಾಗೂ 10ನೇ ಸ್ಥಾನದಲ್ಲಿ ಕ್ರಮವಾಗಿ ರುಕ್ಮಿಣಿ ವಸಂತ ಹಾಗೂ ರಿಷಬ್ ಶೆಟ್ಟಿ ಸ್ಥಾನ ಪಡೆದಿದ್ದಾರೆ.
ಐಎಂಡಿಬಿ ಪ್ರಕಟಿಸಿದ 2025ರ ಅಗ್ರ 10 ತಾರೆಯರು.
ಆ ಮೂಲಕ ಐಎಂಬಿಡಿ ಪ್ರಕಟಿಸಿರುವ 2025ರ ಜನಪ್ರಿಯ ತಾರೆಯರ ಪಟ್ಟಿಯಲ್ಲಿ, ರಶ್ಮಿಕಾ ಮಂದಣ್ಣ, ರುಕ್ಮಿಣಿ ವಸಂತ ಹಾಗೂ ರಿಷಬ್ ಶೆಟ್ಟಿ ಸ್ಥಾನ ಪಡೆಯುವ ಮೂಲಕ ಮೂವರು ಕನ್ನಡಿಗರು ಅಗ್ರ ಹತ್ತರೊಳಗೆ ಸ್ಥಾನ ಪಡೆದಂತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.