ನಟ ಕಮಲ್ ಹಾಸನ್ ಅವರು ತಮ್ಮ ಹೊಸ ಚಿತ್ರ ‘ವಿಕ್ರಮ್’ಚಿತ್ರದ ಟೀಸರನ್ನು ಭಾನುವಾರ ಬಿಡುಗಡೆ ಮಾಡಿದ್ದಾರೆ.
ಸಸ್ಪೆನ್ಸ್, ಥ್ರಿಲ್ಲರ್ ಕತೆಯಂತಿರುವ ಈ ಚಿತ್ರದ ಟೀಸರೇ ತುಂಬಾ ಕುತೂಹಲ ಮೂಡಿಸುತ್ತಿದೆ. ಹಳೇ ಕಾಲದ ಬಂಗಲೆಯೊಂದರ ಒಳಗಿರುವ ಕಮಲ್ ಹಾಸನ್ (ವಿಕ್ರಮ್) ಮನೆಯ ಕಪಾಟು, ಕಿಟಕಿ ಸಂದಿ, ಮೇಜಿನ ಅಡಿ ಭಾಗ ಶಸ್ತ್ರಾಸ್ತ್ರಗಳನ್ನು ಅಡಗಿಸಿಡುತ್ತಾರೆ. ಒಂದಿಷ್ಟು ಪೊಲೀಸರು, ಗಣ್ಯರನ್ನು ಊಟಕ್ಕಾಗಿ ಕರೆದು ಅಣಿಗೊಳಿಸುತ್ತಾರೆ. ಊಟ ನಡೆಯುತ್ತಿದ್ದಂತೆಯೇ ಟೇಬಲ್ ಅಡಿಯಿಂದ ಎರಡು ಕೊಡಲಿಯನ್ನು ಕಮಲ್ ಹಾಸನ್ ತೆಗೆಯುತ್ತಾರೆ. ಅಲ್ಲಿಗೆ ದೃಶ್ಯ ಕಟ್ ಆಗುತ್ತದೆ.
ಒಂದು ಕಾಲದಲ್ಲಿ ಈ ಜಾಗದಲ್ಲಿ ದೆವ್ವ ವಾಸವಾಗಿತ್ತು ಎಂಬ ಬರಹ ಮೂಡುತ್ತದೆ. ಶೂಟಿಂಗ್ ಶೀಘ್ರ ಆರಂಭವಾಗಲಿದೆ ಎಂಬ ಮಾಹಿತಿ ಮೂಡುತ್ತದೆ.
ರಾಜ್ ಕಮಲ್ ಫಿಲ್ಮ್ಸ್ ಇಂಟರ್ ನ್ಯಾಷನಲ್ ಸಂಸ್ಥೆ ಈ ಚಿತ್ರ ನಿರ್ಮಿಸುತ್ತಿದೆ. ಲೋಕೇಶ್ ಕನಗರಾಜ್ ಚಿತ್ರದ ನಿರ್ದೇಶಕರು. ಅನಿರುದ್ಧ್ ಅವರ ಸಂಗೀತವಿದೆ. ಕಮಲ್ ಹಾಸನ್ ಅವರ 66ನೇ ಹುಟ್ಟುಹಬ್ಬದಂದು ಈ ಚಿತ್ರ ಸೆಟ್ಟೇರಿದೆ. ಈ ಚಿತ್ರಕ್ಕೆಅನಿರುದ್ಧಸಂಗೀತ ನೀಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.