ADVERTISEMENT

ಕರುನಾಡ ಚಕ್ರವರ್ತಿ ಶಿವರಾಜ್‌ ಕುಮಾರ್‌ಗೆ 40 ವರ್ಷಗಳ ಸಿನಿ ಪಯಣದ ಸಂಭ್ರಮ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಫೆಬ್ರುವರಿ 2026, 12:27 IST
Last Updated 19 ಫೆಬ್ರುವರಿ 2026, 12:27 IST
<div class="paragraphs"><p>ಶಿವರಾಜ್‌ ಕುಮಾರ್‌</p></div>

ಶಿವರಾಜ್‌ ಕುಮಾರ್‌

   

ಚಿತ್ರ: ಇನ್‌ಸ್ಟಾಗ್ರಾಂ

ಕರುನಾಡ ಚಕ್ರವರ್ತಿ ಶಿವರಾಜ್‌ ಕುಮಾರ್‌ ಅವರು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ 40 ವರ್ಷಗಳನ್ನು ಪೂರೈಸಿದ್ದಾರೆ. ಇದೇ ಸಂಭ್ರಮವನ್ನು ಅಭಿಮಾನಿಗಳು ದುಪ್ಪಟ್ಟುಗೊಳಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ನಟ-ನಟಿಯರು, ಅಭಿಮಾನಿಗಳು, ಕುಟುಂಬಸ್ಥರು ಪೋಸ್ಟರ್‌ಗಳನ್ನು ಹಂಚಿಕೊಳ್ಳುವ ಮೂಲಕ ಶಿವಣ್ಣನ ಸಿನಿ ಪಯಣಕ್ಕೆ ಶುಭ ಹಾರೈಸುತ್ತಿದ್ದಾರೆ.

ಈ ಕುರಿತು ನಿರ್ಮಾಣ ಸಂಸ್ಥೆಯಾಗಿರುವ ‘ಗೀತಾ ಪಿಕ್ಚರ್ಸ್’ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡು ಶಿವಣ್ಣನಿಗೆ ಶುಭಾಶಯ ತಿಳಿಸಿದೆ. ಮತ್ತೊಂದೆಡೆ ದುನಿಯಾ ವಿಜಯ್, ಪವನ್ ಒಡೆಯರ್, ತೆಲುಗು ಚಿತ್ರರಂಗದ ಗಣ್ಯರು ಅಭಿನಂದನೆ ತಿಳಿಸಿದ್ದಾರೆ.

1986ರ ಜೂನ್ 19ರಂದು ಸಿಂಗೀತಂ ಶ್ರೀನಿವಾಸ ರಾವ್ ನಿರ್ದೇಶನದಲ್ಲಿ ಮೂಡಿಬಂದಿದ್ದ ‘ಆನಂದ್’ ಸಿನಿಮಾದ ಮೂಲಕ ಶಿವಣ್ಣ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಬಳಿಕ ಭಿನ್ನ–ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ. ‘ಆನಂದ್’ ಸಿನಿಮಾದಿಂದ ಆರಂಭವಾದ ಈ ಪಯಣ ಇತ್ತೀಚೆಗೆ ಬಿಡುಗಡೆಯಾದ ‘45’ ಸಿನಿಮಾದವರೆಗೆ ಹಲವು ರೀತಿಯ ಪಾತ್ರಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. 130ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಶಿವಣ್ಣ ‘ಜೈಲರ್–2’, ‘ಪೆದ್ದಿ’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗಳು ಬಿಡುಗಡೆಯ ಹಂತದಲ್ಲಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.