ADVERTISEMENT

ವಿನಯ್‌ ರಾಜ್‌ಕುಮಾರ್‌ ಜೊತೆ ‘ಗ್ರಾಮಾಯಣ’ ಆರಂಭಿಸಿದ ಮೇಘಾ ಶೆಟ್ಟಿ 

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2023, 23:30 IST
Last Updated 21 ಸೆಪ್ಟೆಂಬರ್ 2023, 23:30 IST
<div class="paragraphs"><p>ಮೇಘ ಶೆಟ್ಟಿ&nbsp;</p></div>

ಮೇಘ ಶೆಟ್ಟಿ 

   

‘ಪೆಪೆ’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿರುವ ಸಂದರ್ಭದಲ್ಲೇ ವಿನಯ್‌ ರಾಜ್‌ಕುಮಾರ್‌ ‘ಗ್ರಾಮಾಯಣ’ ಸೆಟ್‌ಗೆ ಧುಮುಕಿದ್ದಾರೆ. ಇದೀಗ ಸೆಟ್‌ನಿಂದ ಹೊಸ ಸುದ್ದಿಯೊಂದು ಸಿಕ್ಕಿದ್ದು, ವಿನಯ್‌ಗೆ ‘ಜೊತೆಜೊತೆಯಲಿ’ ಖ್ಯಾತಿಯ ನಟಿ ಮೇಘಾ ಶೆಟ್ಟಿ ಜೋಡಿಯಾಗಿದ್ದಾರೆ. 

ಕಿರುತೆರೆಯಿಂದ ಬೆಳ್ಳಿತೆರೆಗೆ ಹೆಜ್ಜೆ ಇಟ್ಟ ಮೇಘಾ ‘ತ್ರಿಬಲ್‌ ರೈಡಿಂಗ್‌’, ‘ದಿಲ್‌ಪಸಂದ್‌’ ಸಿನಿಮಾಗಳ ಮೂಲಕ ಚಂದನವನದಲ್ಲಿ ಸದ್ದು ಮಾಡಿದವರು. ಸದ್ಯ ಇವರ ನಟನೆಯ ‘ಕೈವ’ ಹಾಗೂ ‘After ಆಪರೇಷನ್‌ ಲಂಡನ್‌ ಕೆಫೆ’ ಸಿನಿಮಾಗಳು ಬಿಡುಗಡೆ ಹಂತದಲ್ಲಿವೆ. 2018ರಲ್ಲೇ ಸೆಟ್ಟೇರಿದ್ದ ‘ಗ್ರಾಮಾಯಣ’ ಸಿನಿಮಾ ಹಲವು ಕಾರಣಗಳಿಂದ ಮಧ್ಯದಲ್ಲೇ ಸ್ಥಗಿತಗೊಂಡಿದ್ದು. ದೇವನೂರು ಚಂದ್ರು ಆ್ಯಕ್ಷನ್‌ ಕಟ್‌ ಹೇಳಿದ್ದ ಈ ಸಿನಿಮಾಗೆ ಇತ್ತೀಚೆಗಷ್ಟೇ ಮರುಜೀವ ಸಿಕ್ಕಿತ್ತು. ನಿರ್ಮಾಪಕ ಕೆ.ಪಿ. ಶ್ರೀಕಾಂತ್‌ ಅವರು ಲಹರಿ ಫಿಲ್ಮ್ಸ್ ಮನೋಹರ್‌ ನಾಯ್ಡು ಜೊತೆಗೂಡಿ ಈ ಪ್ರಾಜೆಕ್ಟ್‌ಗೆ ಮರುಜೀವ ನೀಡಿದ್ದರು.

ADVERTISEMENT

ಹಳೆಯ ಸಿನಿಮಾದ ಯಾವುದೇ ದೃಶ್ಯಾವಳಿಗಳನ್ನು ಬಳಸದೇ, ಹೊಸ ಕಥೆ ಮಾಡಿಕೊಂಡು ಮತ್ತೆ ಹೊಸದಾಗಿ ಚಿತ್ರೀಕರಣ ನಡೆಸಲು ಚಿತ್ರತಂಡ ನಿರ್ಧರಿಸಿತ್ತು. ಈ ಸಿನಿಮಾದಲ್ಲಿ ವಿನಯ್‌ ಅವರು ಹೊಸ ಲುಕ್‌ನಲ್ಲಿ ಪ್ರೇಕ್ಷಕರ ಎದುರಿಗೆ ಬರಲಿದ್ದು, ಅಚ್ಯುತ್‌ ಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಅರುಣ್ ಸಾಗರ್, ಅಪರ್ಣ(ನಿರೂಪಕಿ), ಸೀತಾ ಕೋಟೆ, ಶ್ರೀನಿವಾಸ ಪ್ರಭು, ಮಂಜುನಾಥ್ ಹೆಗೆಡೆ ಮುಂತಾದವರು ತಾರಾಬಳಗದಲ್ಲಿದ್ದಾರೆ. 

ಮೇಘ ಶೆಟ್ಟಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.