ADVERTISEMENT

ಅಪ್ಪು ಪುನೀತ್ ರಾಜ್‌ಕುಮಾರ್ ಅಗಲಿಕೆಗೆ ನಟಿ ರಮ್ಯಾ ಕಣ್ಣೀರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಅಕ್ಟೋಬರ್ 2021, 11:32 IST
Last Updated 29 ಅಕ್ಟೋಬರ್ 2021, 11:32 IST
ಪುನೀತ್ ರಾಜ್‌ಕುಮಾರ್ ಅವರ ನಿಧನಕ್ಕೆ ಚಂದನವನ ಕಣ್ಣೀರು
ಪುನೀತ್ ರಾಜ್‌ಕುಮಾರ್ ಅವರ ನಿಧನಕ್ಕೆ ಚಂದನವನ ಕಣ್ಣೀರು    

ಬೆಂಗಳೂರು: ಶುಕ್ರವಾರ ಹೃದಯಾಘಾತಕ್ಕೆ ಒಳಗಾಗಿ ನಿಧನರಾದ ಕನ್ನಡದ ಜನಪ್ರಿಯ ನಟ ಪುನೀತ್ ರಾಜ್‌ಕುಮಾರ್ ಅವರಿಗಾಗಿ ಚಂದನವನ ಕಂಬನಿ ಮಿಡಿದಿದೆ.

ಪುನೀತ್ ಅವರ ಜತೆ ತೆರೆ ಹಂಚಿಕೊಂಡಿದ್ದ ನಟ-ನಟಿಯರು ದೊಡ್ಮನೆ ಹುಡುಗನ ಗುಣಗಾನ ಮಾಡುವ ಮೂಲಕ ನಟನ ಜತೆಗಿನ ನೆನಪನ್ನು ಹಂಚಿಕೊಂಡಿದ್ದಾರೆ.

ನಟಿ ರಮ್ಯಾ ಅವರು, ಭಾವನೆಗಳು ಕೆಲವು ವೈಯಕ್ತಿಕ. ಅವುಗಳನ್ನು ಪದಗಳಲ್ಲಿ ಹೇಳಲಾಗದು. RIP ಎಂದು ಹೇಳಿ ಮುಗಿಸಲಾಗದು. ದೇಹ ಮನಸ್ಸಿಗೂ ಮೀರಿದ್ದು ಭಾವನೆ. ಕೆಲವು ಬಾಂಧವ್ಯ ವರ್ಣನೆಗೂ ಮೀರಿದ್ದು. ಬೇರೇನನ್ನು ಹೇಳಲಾಗದ ಸಂದರ್ಭ ಇದು. ಸಿನಿಮಾ ರಂಗದಲ್ಲಿ ಆತ ನನಗೆ ಅತ್ಯಂತ ಆಪ್ತ ಸ್ನೇಹಿತ. ಅಪ್ಪು ನೀವು ಎಂದೆಂದಿಗೂ ಮಾಸದ ನೆನಪು. ಸದಾ ನನ್ನ ನೆನಪಿನಲ್ಲಿ ಎಂದೆಂದೂ ಇರುವಿರಿ ಅಪ್ಪು ಎಂದು ತಮ್ಮ ಇನ್‌ಸ್ಟಾಗ್ರಾಂ ಸ್ಟೋರೀಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ADVERTISEMENT
ಇನ್‌ಸ್ಟಾಗ್ರಾಂ ಸ್ಟೋರೀಸ್‌

ರಮ್ಯಾ ಮತ್ತು ಪುನೀತ್ ಅವರ ಜೋಡಿಯನ್ನು ಚಿತ್ರರಂಗದಲ್ಲಿ ಜನರು ಮೆಚ್ಚಿಕೊಂಡಿದ್ದರು. ಅಲ್ಲದೆ, ರಮ್ಯಾ ಚಿತ್ರರಂಗದಿಂದ ದೂರ ಉಳಿದರೂ, ಅಪ್ಪು ಜತೆ ಸ್ನೇಹ ಹೊಂದಿದ್ದರು.

ಗೆಳೆಯನ ಅಗಲಿಕೆಯ ನೋವು ಕುರಿತು ರಮ್ಯಾ ತಮ್ಮ ಭಾವನೆಗಳನ್ನು ಸಾಮಾಜಿಕ ತಾಣದ ಮೂಲಕ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.