ADVERTISEMENT

‘ಮಾಫಿಯಾ’ದಲ್ಲಿ ಡೈನಾಮಿಕ್‌ ಪ್ರಿನ್ಸ್‌ ಪ್ರಜ್ವಲ್ ದೇವರಾಜ್ ಖಡಕ್‌ ಪೊಲೀಸ್‌

​ಪ್ರಜಾವಾಣಿ ವಾರ್ತೆ
Published 12 ಜನವರಿ 2022, 13:34 IST
Last Updated 12 ಜನವರಿ 2022, 13:34 IST
ಮಾಫಿಯಾ ಚಿತ್ರದಲ್ಲಿ ಪ್ರಜ್ವಲ್‌ ದೇವರಾಜ್‌
ಮಾಫಿಯಾ ಚಿತ್ರದಲ್ಲಿ ಪ್ರಜ್ವಲ್‌ ದೇವರಾಜ್‌   

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ‘ಮಾಫಿಯಾ’ ಸಿನಿಮಾದಲ್ಲಿ ‘ಡಿ.ಸತ್ಯನಾರಾಯಣ’ ಎಂಬ ಪಾತ್ರದಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

‘ಮಮ್ಮಿ’ ಹಾಗೂ ‘ದೇವಕಿ’ ಸಿನಿಮಾ ನಿರ್ದೇಶಿಸಿದ್ದ ಲೋಹಿತ್ ಎಚ್‌. ನಿರ್ದೇಶನದಲ್ಲಿ ‘ಮಾಫಿಯಾ’ ಚಿತ್ರೀಕರಣ ನಡೆಯುತ್ತಿದೆ. ಇತ್ತೀಚೆಗೆ, ಎರಡು ವರ್ಷ ಬಿಟ್ಟಿದ್ದ ಕೂದಲನ್ನುಚಿತ್ರಕ್ಕಾಗಿ ಕತ್ತರಿಸಿ ಅದನ್ನು ಪ್ರಜ್ವಲ್‌ ದೇವರಾಜ್‌ ಕ್ಯಾನ್ಸರ್‌ ರೋಗಿಗಳಿಗೆ ದಾನ ಮಾಡಿದ್ದರು. ಈ ಮೂಲಕ ಹೊಸ ಲುಕ್‌ನಲ್ಲಿ ಅವರು ಕಾಣಿಸಿಕೊಂಡಿದ್ದರು. ಪ್ರಜ್ವಲ್‌ ಅವರ 35ನೇ ಚಿತ್ರವಾಗಿದ್ದು, ಸಿನಿಮಾದಲ್ಲಿ ಖ್ಯಾತ ನಟ ದೇವರಾಜ್‌ ಅವರೂ ಪೊಲೀಸ್‌ ಅಧಿಕಾರಿಯಾಗಿ ನಟಿಸುತ್ತಿದ್ದಾರೆ. ಸಾಧುಕೋಕಿಲ ಅವರು ವಿಶೇಷ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ನಾಯಕಿಯಾಗಿ ನಟಿ ಅದಿತಿ ಪ್ರಭುದೇವ ನಟಿಸುತ್ತಿದ್ದು, ತನಿಖಾ ಪತ್ರಕರ್ತೆಯ ಪಾತ್ರ ಅವರದ್ದು.

ಕಂಠೀರವ ಸ್ಟುಡಿಯೊದಲ್ಲಿ ಪೊಲೀಸ್‌ ಕಂಟ್ರೋಲ್‌ ರೂಂ ಸೆಟ್‌ ನಿರ್ಮಿಸಿ ಚಿತ್ರದ ಚಿತ್ರೀಕರಣ ಆರಂಭವಾಗಿದ್ದು,ಹೈದರಾಬಾದ್‌ನ ರಾಮೋಜಿ‌ ಫಿಲಂ ಸಿಟಿಯಲ್ಲೂ ಕೆಲ ದೃಶ್ಯಗಳನ್ನು ಶೂಟಿಂಗ್‌ ಮಾಡಲು ಚಿತ್ರತಂಡ ನಿರ್ಧರಿಸಿದೆ. ಬೆಂಗಳೂರು ಕುಮಾರ್ ಫಿಲಂಸ್ ಲಾಂಛನದಲ್ಲಿ ಕುಮಾರ್‌ ಬಿ. ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಅನೂಪ್ ಸೀಳಿನ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಮಾಸ್ತಿ ಸಂಭಾಷಣೆ ಬರೆಯುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.