
ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನಿರ್ದೇಶಿಸಿರುವ ಪಿ.ಸಿ.ಶೇಖರ್ ಈಗ ವೆಬ್ ಸಿರೀಸ್ ಲೋಕಕ್ಕೆ ಕಾಲಿಟ್ಟಿದ್ದಾರೆ. ಅವರ ನಿರ್ದೇಶನ ಹಾಗೂ ನಿರ್ಮಾಣದ ‘Just us’ ಎಂಬ ಎಂಟು ಕಂತುಗಳ ಈ ವೆಬ್ ಸಿರೀಸ್ ಜ.1ರಂದು ಯೂಟ್ಯೂಬ್‌ನಲ್ಲಿ ಬಿಡುಗಡೆಗೊಳ್ಳಲಿದೆ.
‘ಎಂಜಿನಿಯರ್ ಆಗಬೇಕಾದರೆ ಬಿ.ಇ ಮಾಡಬೇಕು. ವೈದ್ಯರಾಗಬೇಕೆಂದರೆ ಎಂ.ಬಿ.ಬಿ.ಎಸ್ ಓದಬೇಕು. ಕಾರು ಚಾಲನೆ ಮಾಡಬೇಕಾದರೂ ತರಬೇತಿ ಬೇಕು. ಆದರೆ ಮದುವೆ ವಿಷಯಕ್ಕೆ ಬಂದಾಗ, ಹುಡುಗ - ಹುಡುಗಿಯನ್ನು ಮನೆಯವರು ಮಾತನಾಡಿ ಎಂದು ಕಳುಹಿಸಿದಾಗ ಏನು ಮಾತನಾಡಬೇಕೆಂದು ಹೆಚ್ಚಿನವರಿಗೆ ತಿಳಿದಿರುವುದಿಲ್ಲ. ಹಾಗಾಗಿ ನಾನು ಸೈಕಿಯಾರ್ಟಿಸ್ಟ್ ಹಾಗೂ ಮ್ಯಾರೇಜ್ ಕೌನ್ಸಿಲರ್‌ಗಳಿಂದ ವಿಷಯ ಸಂಗ್ರಹಿಸಿ ಈ ವೆಬ್ ಸಿರೀಸ್ ಮಾಡಿರುವೆ. ಮದುವೆ ಕುರಿತಾದ ಹಾಸ್ಯಮಯ ಕಥೆಯಿದೆ. ಗುಣಮಟ್ಟದಲ್ಲಿ ರಾಜಿಯಾಗಿಲ್ಲ. ಸಿನಿಮಾ ರೀತಿಯಲ್ಲಿಯೇ ಮಾಡಿದ್ದೇವೆ. ನನ್ನದೇ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಸರಣಿ ಬಿಡುಗಡೆಯಾಗಲಿದೆ’ ಎಂದರು ಪಿ.ಸಿ.ಶೇಖರ್.
ವಿವೇಕ್, ಮೇಘಾ ಜಾದವ್ ನಟಿಸಿದ್ದಾರೆ. ಮುರಳಿ ಕ್ರಿಶ್ ಛಾಯಾಚಿತ್ರಗ್ರಹಣ, ಎಸ್. ಪ್ರದೀಪ್ ವರ್ಮ ಸಂಗೀತ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.