ADVERTISEMENT

Kantara Chapter 1: ಮೊದಲ ದಿನವೇ ದಾಖಲೆಯ ಟಿಕೆಟ್‌ ಮಾರಾಟ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಅಕ್ಟೋಬರ್ 2025, 7:48 IST
Last Updated 3 ಅಕ್ಟೋಬರ್ 2025, 7:48 IST
<div class="paragraphs"><p>ನಟ ರಿಷಬ್ ಶೆಟ್ಟಿ</p></div>

ನಟ ರಿಷಬ್ ಶೆಟ್ಟಿ

   

ಚಿತ್ರ: kantarafilm

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ 'ಕಾಂತಾರ ಚಾಪ್ಟರ್ 1' ಸಿನಿಮಾ ಅಕ್ಟೋಬರ್ 2ರಂದು ವಿಶ್ವಾದ್ಯಂತ ಬಿಡುಗಡೆಯಾಗಿದೆ. ಕನ್ನಡ, ತೆಲುಗು ಸೇರಿದಂತೆ ಒಟ್ಟು ಐದು ಭಾಷೆಗಳಲ್ಲಿ ಕಾಂತಾರ ಚಾಪ್ಟರ್‌ 1 ತೆರೆಕಂಡಿದೆ.

ADVERTISEMENT

ದಾಖಲೆಯ ಟಿಕೆಟ್‌ ಮಾರಾಟ

ಕಾಂತಾರ ಚಾಪ್ಟರ್ 1 ಸಿನಿಮಾ ಬಿಡುಗಡೆಯಾದ 24 ಗಂಟೆಗಳಲ್ಲಿ ದಾಖಲೆಯ ಟಿಕೆಟ್‌ಗಳು ಮಾರಾಟವಾಗಿವೆ. ‘ಬುಕ್‌ ಮೈ ಶೋ’ ಆ್ಯಪ್‌ ಒಂದರಲ್ಲೇ ಬರೋಬ್ಬರಿ 1.28 ಮಿಲಿಯನ್ ಟಿಕೆಟ್‌ಗಳು ಮಾರಾಟವಾಗಿವೆ. ಮೊದಲ ದಿನದ ಅತ್ಯಧಿಕ ಟಿಕೆಟ್‌ ಮಾರಾಟವಾದ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಹಾಗೂ ಕಾಂತಾರ ಫಿಲ್ಮ್‌ ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ.

ಅಭಿಮಾನಿಗಳಿಗೆ ನಟ ರಿಷಬ್ ಶೆಟ್ಟಿ ಮನವಿ

‘ಆತ್ಮೀಯ ಕಾಂತಾರ ಕುಟುಂಬ ಮತ್ತು ಸಿನಿಮಾಭಿಮಾನಿಗಳೇ, 'ಕಾಂತಾರ' ಕೇವಲ ಒಂದು ಸಿನಿಮಾ ಅಲ್ಲ. ಅದು ನಮ್ಮ ಸಂಸ್ಕೃತಿ, ನಮ್ಮ ನೆಲದ ಕಥೆ. ಆರಂಭದಿಂದಲೂ ಈ ಪಯಣ ನಮ್ಮ ಜೊತೆ ನಿಮ್ಮದೂ ಕೂಡ. ನಿಮ್ಮ ಅಪಾರ ಪ್ರೀತಿ, ಬೆಂಬಲವೇ ಈ ಚಿತ್ರವನ್ನು ಇಷ್ಟು ಎತ್ತರಕ್ಕೆ ಕೊಂಡೊಯ್ದಿದೆ. ಆ ಋಣ ಯಾವಾಗಲೂ ನಮ್ಮ ಮೇಲಿರುತ್ತದೆ’.

‘ಈಗ ನಮ್ಮದೊಂದು ವಿನಂತಿ: ಈ ಚಿತ್ರದಲ್ಲಿ ತೆರೆಯ ಮುಂದೆ, ತೆರೆಯ ಹಿಂದೆ ಇರುವ ಸಾವಿರಾರು ಜನರ ಕನಸು ಇದೆ. ಪೈರಸಿಯಿಂದ ಈ ಕನಸನ್ನು ಪೋಲಾಗಲು ಬಿಡಬೇಡಿ, ದಯವಿಟ್ಟು ಚಿತ್ರಮಂದಿರಗಳಲ್ಲಿ ಯಾವುದೇ ಚಿತ್ರದ ದೃಶ್ಯವನ್ನು ಚಿತ್ರೀಕರಿಸಬೇಡಿ ಅಥವಾ ಹಂಚಿಕೊಳ್ಳಬೇಡಿ. ಸಣ್ಣ ವಿಡಿಯೋ ತುಣುಕೂ ಸಿನಿಮಾದ ಅಸಲಿ ಮಾಯೆಯನ್ನು ಮಲಿನ ಮಾಡುತ್ತದೆ. ಈ ಸಂಭ್ರಮ ದೊಡ್ಡ ಪರದೆಯಲ್ಲಿಯೇ ಇರಲಿ. ಈ ಅದ್ಭುತ ಪ್ರಯಾಣವನ್ನು ಒಟ್ಟಾಗಿ ಕಾಪಾಡೋಣ. 'ಕಾಂತಾರ'ದ ಅನುಭವ ಎಂದೆಂದಿಗೂ ಚಿತ್ರಮಂದಿರಕ್ಕೆ ಮೀಸಲಾಗಲಿ’ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.