ADVERTISEMENT

ಭಕ್ತಿ–ಭಾವದ 'ಕಾಂತಾರ' ಚಿತ್ರಕ್ಕೆ 3ನೇ ವರ್ಷದ ಸಂಭ್ರಮ: ಹೊಂಬಾಳೆ ಫಿಲ್ಮ್ಸ್

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 7:04 IST
Last Updated 30 ಸೆಪ್ಟೆಂಬರ್ 2025, 7:04 IST
<div class="paragraphs"><p>ಚಿತ್ರ ಕೃಪೆ:&nbsp;&nbsp;<a href="https://x.com/hombalefilms">@hombalefilms</a></p></div>

ಚಿತ್ರ ಕೃಪೆ:  @hombalefilms

   

ಮೂರು ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ‘ಕಾಂತಾರ‘ ಸಿನಿಮಾವು ಅದ್ಧೂರಿ ಯಶಸ್ಸು ಕಂಡಿತ್ತು. ಹೊಂಬಾಳೆ ಫಿಲ್ಮ್ಸ್ ಇಂದು ತನ್ನ ಅಧಿಕೃತ ಸಾಮಾಜಿಕ ಮಾಧ್ಯಮದಲ್ಲಿ 'ಭಕ್ತಿಯ ಕಾಂತಾರ ಸಿನಿಮಾ ಯಶಸ್ವಿಯಾಗಿ 3ನೇ ವರ್ಷವನ್ನು ಆಚರಿಸುತ್ತಿದೆ' ಎಂದು ಬರೆದುಕೊಂಡಿದೆ.

ದೇಶದಾದ್ಯಂತ ಜನರ ಹೃದಯವನ್ನು ಗೆದ್ದಿರುವುದು ಸಂತಸದ ಕ್ಷಣವಾಗಿದೆ. ನಿಮ್ಮ ಪ್ರೀತಿ ಅದನ್ನು ಶಾಶ್ವತಗೊಳಿಸಿದೆ. ನಿಮ್ಮ ಆಶೀರ್ವಾದ ಅದನ್ನು ದೈವಿಕಗೊಳಿಸಿತು. ಈ ಪ್ರಯಾಣವು ಇಲ್ಲಿಗೆ ನಿಲ್ಲುವುದಿಲ್ಲ. ಇದು ಮುಂದುವರೆಯಲಿದೆ. ಇದೇ ಅ. 2ರಂದು ನಿಮ್ಮ ಮುಂದೆ ಕಾಂತಾರ–1 ಬರಲಿದ್ದು ಈ ಚಿತ್ರಕ್ಕೆ ನಿಮ್ಮ ಹಾರೈಕೆ ಇರಲಿ ಎಂದು ಬರೆದುಕೊಂಡಿದ್ದಾರೆ.

ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ‘ಕಾಂತಾರ ಅಧ್ಯಯ-1‘ ಅಕ್ಟೋಬರ್ 2 ರಂದು ತೆರೆ ಕಾಣಲಿದ್ದು, ಈ ಚಿತ್ರದಲ್ಲಿ ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ ಸೇರಿ ಹಲವರು ಬಣ್ಣ ಹಚ್ಚಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.